ರಾಮಣ್ಣಗೆ ಕೃಷಿ ಪ್ರಶಸ್ತಿ

ಬುಧವಾರ, ಜೂಲೈ 17, 2019
26 °C

ರಾಮಣ್ಣಗೆ ಕೃಷಿ ಪ್ರಶಸ್ತಿ

Published:
Updated:

ಮಂಡ್ಯ: ಕರ್ನಾಟಕ ಸಂಘವು ಕೊಡುವ ಅರಸಮ್ಮ ಮೆಣಸೇಗೌಡ ಕೃಷಿ ಪ್ರಶಸ್ತಿಗೆ ತಾಲ್ಲೂಕಿನ ಪಂಚೇಗೌಡನದೊಡ್ಡಿ ಗ್ರಾಮದ ಯಶಸ್ವಿ ರೈತ ಪಿ. ರಾಮಣ್ಣ ಭಾಜನರಾಗಿದ್ದಾರೆ.ಶುಕ್ರವಾರ ಸುದ್ದಿಗಾರರಿಗೆ ವಿಷಯ ತಿಳಿಸಿದ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶ್‌ಗೌಡ ಅವರು, ಜುಲೈ 16 ರಂದು ಸಂಜೆ 6 ಗಂಟೆಗೆ ರೈತ ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿಯೊಂದಿಗೆ 15 ಸಾವಿರ ರೂಪಾಯಿ ನಗದು ನೀಡಿ ಗೌರವಿಸಲಾಗುವುದು ಎಂದರು.ರಾಮಣ್ಣ ಅವರು ಎರಡೂವರೆ ಎಕರೆ ಪ್ರದೇಶದಲ್ಲಿ ವಿವಿಧ ಬೆಳೆಗಳನ್ನು ಬೆಳೆಯುವ ಮೂಲಕ ಕೃಷಿಯನ್ನು ಲಾಭದಾಯಕವಾಗಿಸಿಕೊಂಡಿದ್ದಾರೆ. ಕೃಷಿ ಹಿನ್ನಡೆ ಅನುಭವಿಸುತ್ತಿರುವ ಹಾಗೂ ಲಾಭದಾಯಕವಲ್ಲದ ಉದ್ಯೋಗ ಎಂಬಂತಹ ವಾತಾವರಣದಲ್ಲಿ ರಾಮಣ್ಣ ಅವರು ರೈತರಿಗೆ ಮಾದರಿಯಾಗದ್ದಾರೆ ಎಂದರು.ಪ್ರಶಸ್ತಿಯನ್ನು ಮೂಡಬಿದರೆಯ ಆಳ್ವಾಸ್ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಪ್ರದಾನ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕರಾದ ರಮೇಶ್‌ಬಾಬು ಬಂಡಿಸಿದ್ದೇಗೌಡ, ಕೆ.ಸಿ. ನಾರಾಯಣಗೌಡ, ಮರಿತಿಬ್ಬೇಗೌಡ, ಬಿ. ರಾಮಕೃಷ್ಣ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಜಯರಾಮಯ್ಯ ಭಾಗವಹಿಸಲಿದ್ದಾರೆ.ಶಾಸಕ ಎನ್. ಚಲುವರಾಯಸ್ವಾಮಿ ಅಧ್ಯಕ್ಷತೆ ವಹಿಸಲಿದ್ದು, ಮಾಜಿ ಶಾಸಕ ಎಂ.ಶ್ರೀನಿವಾಸ್ ಉಪಸ್ಥಿತರಿರಲಿದ್ದಾರೆ ಎಂದರು.

ಮಾಜಿ ಶಾಸಕ ಎಂ. ಶ್ರೀನಿವಾಸ್ ಅವರು ತಮ್ಮ ತಂದೆ-ತಾಯಿಯವರಾದ ಅರಸಮ್ಮ ಹಾಗೂ ವೆುಣಸೇಗೌಡ ಅವರ ಹೆಸರಿನಲ್ಲಿ ಪ್ರಶಸ್ತಿಯನ್ನು ಸ್ಥಾಪಿಸಿದ್ದಾರೆ. ಅವರ ಹೆಸರಿನಲ್ಲಿ ಪ್ರತಿ ವರ್ಷ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದು ಹೇಳಿದರು.

ಎಚ್.ವಿ. ಜಯರಾಂ, ಜಿ.ಟಿ. ವೀರಪ್ಪ, ಮಲ್ಲಾರಾಧ್ಯ ಪ್ರಸನ್ನ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry