ರಾಮದೇವ್ ಆಸ್ಪತ್ರೆಯಿಂದ ಬಿಡುಗಡೆ

ಬುಧವಾರ, ಜೂಲೈ 17, 2019
26 °C

ರಾಮದೇವ್ ಆಸ್ಪತ್ರೆಯಿಂದ ಬಿಡುಗಡೆ

Published:
Updated:

ಡೆಹ್ರಾಡೂನ್ (ಪಿಟಿಐ): ಎರಡು ದಿನಗಳ ಹಿಂದೆ ಉಪವಾಸ ಕೈಬಿಟ್ಟಿದ್ದ  ಬಾಬಾ ರಾಮದೇವ್  ಅವರು  ಇಲ್ಲಿನ ಹಿಮಾಲಯನ್ ಆಸ್ಪತ್ರೆಯಿಂದ ಮಂಗಳವಾರ ಬಿಡುಗಡೆಯಾಗಿದ್ದಾರೆ.

~ಭ್ರಷ್ಟಾಚಾರದ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ನಾನೇನು ಪಾಪ ಮಾಡಿಲ್ಲ~ ಎಂದಿರುವ ಬಾಬಾ ಅವರು, ~ವಿದೇಶದಲ್ಲಿರುವ ಕಪ್ಪುಹಣ ಭಾರತಕ್ಕೆ ಮರಳಿ ತರುವ ಕುರಿತ  ತಮ್ಮ ಹೋರಾಟವನ್ನು ಮುಂದುವರೆಸುವೆ~  ಎಂದು ಹೇಳಿದರು.

ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಬಾಬಾ ಅವರು, ~ಸಂಸತ್ತು ಮತ್ತು ವಿಧಾನಸಭಗೆ ಕಳಂಕರಹಿತ ಪ್ರತಿನಿದಿಗಳು ಆಯ್ಕೆಯಾಗಬೇಕು ಹಾಗೂ  ವಿದೇಶದಲ್ಲಿ ಕೂಡಿಟ್ಟಿರುವ 4 ಲಕ್ಷ ಕೋಟಿ ರೂಪಾಯಿ ಕಪ್ಪುಹಣವನ್ನು  ಭಾರತಕ್ಕೆ ಮರಳಿ ತರಬೇಕೆಂಬುದು ನನ್ನ ಬಯಕೆ~ ಎಂದು ಹೇಳಿದರು

~ಭ್ರಷ್ಟಾಚಾರದ ವಿರುದ್ಧ ಮತ್ತು ವಿದೇಶದಲ್ಲಿನ ಕಪ್ಪು ಹಣ ಭಾರತಕ್ಕೆ ಮರಳಿ ತರಬೇಕೆಂದು ಹೋರಾಟ ಮಾಡಿ ನಾನು ಯಾವುದೇ ಪಾಪ ಮಾಡಿಲ್ಲ. ಜನತೆಯ ಸಹಕಾರದಿಂದ  ಭ್ರಷ್ಟಾಚಾರದ ವಿರುದ್ಧದ  ಹೋರಾಟವನ್ನು ಉಸಿರುವವರೆಗೂ ನಡೆಸುವೆ~  ಎಂದು ಅವರು ತಿಳಿಸಿದರು.

ತಮ್ಮ ಬೆಂಬಲಿಗರೊಂದಿಗೆ ದೆಹಲಿಯ ರಾಮಲೀಲಾ ಮೈದಾನದಲ್ಲಿ ಸತ್ಯಾಗ್ರಹ ಮಾಡುತ್ತಿದ್ದಾಗ ನಡೆದ ಪೋಲಿಸ್ ದೌರ್ಜನ್ಯವನ್ನು ಖಂಡಿಸಿದ ಅವರು,  ~ನನ್ನ  ಬೆಂಬಲಿಗರು  ಎದುರಿಸಿದ ತೊಂದರೆಗಳೂ ವ್ಯರ್ಥವಾಗುವುದಿಲ್ಲ~ ಎಂದರು.  ~ಪ್ರಸಕ್ತ ಭ್ರಷ್ಟ ವ್ಯವಸ್ಥೆಯಲ್ಲಿ  ಸಂಪೂರ್ಣ ಬದಲಾವಣೆ ಕಾಣುವಿರಿ~ ಎಂದೂ ಅವರು ಭರವಸೆ ವ್ಯಕ್ತಪಡಿಸಿದರು.ಶ್ರೀ ರವಿಶಂಕರ್ ಗುರೂಜಿ ಮತ್ತು ಇತರ ಗಣ್ಯರ ಮನವಿ ಮನ್ನಸಿ,  ಭ್ರಷ್ಟಾಚಾರ ತಡೆಗೆ ಕಠಿಣವಾದ ಕಾನೂನು ಜಾರಿಗಾಗಿ ಒತ್ತಾಯಿಸಿ ತಾವು ಜೂನ್ 4ರಂದು ಆರಂಭಿಸಿದ  ತಮ್ಮ 9 ದಿನಗಳ ಉಪವಾಸ ಸತ್ಯಾಗ್ರಹವನ್ನು  ಬಾಬಾ ರಾಮದೇವ್ ಅವರು ಜೂನ್ 11ರಂದು ಕೊನೆಗೊಳಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry