ಭಾನುವಾರ, ಅಕ್ಟೋಬರ್ 20, 2019
28 °C

ರಾಮದೇವ್ ಹಣಕಾಸು ಮೂಲ: ಸಮನ್ಸ್ ಜಾರಿ

Published:
Updated:

ನವದೆಹಲಿ (ಪಿಟಿಐ): ಯೋಗ ಗುರು ಬಾಬಾ ರಾಮದೇವ್ ಅವರ ಹಣಕಾಸು ಮೂಲದ ಶೋಧ ಕಾರ್ಯದಲ್ಲಿ ತೊಡಗಿರುವ ಜಾರಿ ನಿರ್ದೇಶನಾಲಯ, ಅವರ ಟ್ರಸ್ಟ್ ವಿದೇಶಿ ವಿನಿಮಯ ನೋಂದಣಿ ಉಲ್ಲಂಘನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹಾಯಕ ಬಾಲಕೃಷ್ಣ ಅವರಿಗೆ ಮಂಗಳವಾರ ಸಮನ್ಸ್ ಜಾರಿ ಮಾಡಿದೆ.`ಬಾಲಕೃಷ್ಣ ಅಥವಾ ಅವರ ಪರವಾಗಿ ಯಾರಾದರೂ ಸದರಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಅಧಿಕೃತ ದಾಖಲೆ ಪತ್ರಗಳೊಂದಿಗೆ ಜನವರಿ 10 ರಂದು ನಿರ್ದೇಶನಾಲಯದ ಮುಂದೆ ಹಾಜರಾಗುವಂತೆ ಸಮನ್ಸ್‌ನಲ್ಲಿ ತಿಳಿಸಲಾಗಿದೆ~ ಎಂದು ಅಧಿಕೃತ ಮೂಲಗಳಿಂದ ತಿಳಿದು ಬಂದಿದೆ.

 

Post Comments (+)