`ರಾಮ'ನ ಮರಕೋತಿ ಆಟ

ಬುಧವಾರ, ಜೂಲೈ 17, 2019
26 °C
ಪಿಕ್ಚರ್ ಪ್ಯಾಲೆಸ್

`ರಾಮ'ನ ಮರಕೋತಿ ಆಟ

Published:
Updated:

ಮಕ್ಕಳು ಮರಕೋತಿ ಆಟ ಆಡುವುದು ಗೊತ್ತೇ ಇದೆ. ಇಲ್ಲಿ ಕೋತಿಮರಿಯೇ ಆ ಆಟ ಆಡುತ್ತಿದೆ. ಮಾಗಡಿ ರಸ್ತೆಯ ಹೇರೋಹಳ್ಳಿಯಲ್ಲಿ ರಾಮನವಮಿಯ ದಿನ ಕೋತಿಮರಿಯೊಂದು ಅನಾಥವಾಯಿತು. ಅಂದರೆ, ಅದರ ಅಪ್ಪ-ಅಮ್ಮ ಹೇಗೋ ನಾಪತ್ತೆಯಾಗಿಬಿಟ್ಟವು. ಆಮೇಲೆ ಆ ಮರಿಗೆ ಅಲ್ಲಿದ್ದ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳು ಆಪ್ತರಾಗತೊಡಗಿದರು. ರಾಮನವಮಿ ದಿನ ಸಿಕ್ಕ ಕೋತಿಮರಿಗೆ ಮಕ್ಕಳು `ರಾಮ' ಎಂದು ಹೆಸರಿಟ್ಟರು. ಈಗ ಅಲ್ಲಿ ಮಕ್ಕಳು `ರಾಮ' ಎಂದು ಕರೆದರೆ ಸಾಕು, ಅದು ಹೆಗಲಿನಿಂದ ಹೆಗಲಿಗೆ ಚಂಗನೆ ಜಿಗಿಯುತ್ತದೆ. ಮರಕೋತಿ ಆಟ ಆಡುವುದು ಹೇಗೆ ಎಂದು ಪ್ರಾತ್ಯಕ್ಷಿಕೆಯನ್ನೂ ನೀಡುವ ಈ ರಾಮ, ಮಕ್ಕಳ ಮಿತ್ರನಾಗಿರುವುದು ನಗರದ ಪರಿಸರದಲ್ಲಿ ಅಪರೂಪವೇ ಎನ್ನಬಹುದು. `ರಾಮ'ನ ಮರಕೋತಿಯ ಭಾವಭಂಗಿಗಳು ಇದೋ...

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry