ಗುರುವಾರ , ಮೇ 6, 2021
27 °C

ರಾಮನ ಮೌಲ್ಯಗಳ ಅನುಕರಣೆಯಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆನೇಕಲ್: ಶ್ರೀರಾಮನು ತ್ರೇತಾಯುಗದಲ್ಲಿಯೇ ಪ್ರಜಾಪ್ರಭುತ್ವ ಮೌಲ್ಯಗಳಿಗೆ ಗೌರವ ನೀಡುವ ಮೂಲಕ ಜನಸಾಮಾನ್ಯರ ಭಾವನೆಗಳಿಗೆ ಸ್ಪಂದಿಸಿದ್ದ. ಅಂತಹ ವ್ಯಕ್ತಿಯ ಆದರ್ಶಗಳು ಇಂದಿಗೂ ಪ್ರಸ್ತುತ ಎಂದು ತುಮಕೂರು ಹಿರೇಮಠದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ಪಟ್ಟಣದ ರಾಮಕುಟೀರದಲ್ಲಿ ಭಾನುವಾರ ರಾತ್ರಿ ಶ್ರೀರಾಮ ಸೇವಾ ಸಮಿತಿ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ರಾಮನವಮಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದರು.

ಸಹಸ್ರಾರು ವರ್ಷಗಳು ಕಳೆದರೂ ರಾಮಾಯಣ, ಮಹಾಭಾರತಗಳು ಭಾರತೀಯರ ನರನಾಡಿಗಳಲ್ಲಿ ಮಿಳಿತವಾಗಿವೆ.ಇಂದಿಗೂ ಸಹ ಈ ಮಹಾ ಪುರಾಣಗಳ ಬಗ್ಗೆ ಚಿಂತನೆ ನಡೆಯುತ್ತಿರುವುದು ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದೆ.  ಆದರೆ ಇತ್ತೀಚಿನ ದಿನಗಳಲ್ಲಿ ಮೌಲ್ಯಗಳ ಕುಸಿತದಿಂದ ರಾಜಕೀಯ, ಸಾಮಾಜಿಕ ವ್ಯವಸ್ಥೆಯಲ್ಲಿ ಬದಲಾವಣೆಗಳಾಗುತ್ತಿರುವುದು ಆತಂಕಕಾರಿಯಾಗಿದೆ. ಜನಕಲ್ಯಾಣ, ಲೋಕಕಲ್ಯಾಣಕ್ಕಿಂತ ಸ್ವಾರ್ಥಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿರುವುದು ದುರದೃಷ್ಟಕರ ಎಂದರು.ಪುರಸಭಾ ಅಧ್ಯಕ್ಷೆ ಉಮಾಗೋಪಿ, ಉಪಾಧ್ಯಕ್ಷ ಶ್ರೆನಿವಾಸ್, ಮತ್ತಿತರರು ಹಾಜರಿದ್ದರು. ಜಾನಪದ ಅಕಾಡೆಮಿ ಸದಸ್ಯ ಎಂ.ಕೆ.ಸಿದ್ದರಾಜು ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಭಾವ ನಿನಾದ ತಂಡದ ವತಿಯಿಂದ ಸುಗಮ ಸಂಗೀತ ಏರ್ಪಡಿಸಲಾಗಿತ್ತು. ನಾಟಕ ಪ್ರದರ್ಶನ: ಮಂಗಳವಾರ (ಏ.3) ಬೆಂಗಳೂರು ರೂಪಾಂತರ ತಂಡದಿಂದ ಸಂತ ಕವಿ ಕನಕದಾಸರ `ರಾಮಧಾನ್ಯ~ ಚರಿತೆ ನಾಟಕ ಕಾರ್ಯಕ್ರಮವಿದೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.