ರಾಮಮಂದಿರ: ಸರ್ವಪಕ್ಷ ಬೆಂಬಲಕ್ಕೆ ಮನವಿ

5

ರಾಮಮಂದಿರ: ಸರ್ವಪಕ್ಷ ಬೆಂಬಲಕ್ಕೆ ಮನವಿ

Published:
Updated:

ಗುಲ್ಬರ್ಗ: ಅಯೋಧ್ಯೆಯ 67 ಎಕರೆ ಪ್ರದೇಶದಲ್ಲಿ ಸಂಪೂರ್ಣವಾಗಿ ರಾಮಂದಿರವೇ ನಿರ್ಮಾಣ ಆಗಬೇಕು. ದೇಶದ ಎಲ್ಲಿಯೂ ಬಾಬರಿ ಮಸೀದಿ ಪುನರ್ ನಿರ್ಮಾಣ ಮಾಡಬಾರದು. ಈ ನಿಲುವನ್ನು ಬಿಜೆಪಿ ಸೇರಿದಂತೆ ಎಲ್ಲ ಪಕ್ಷಗಳು ಬೆಂಬಲಿಸಬೇಕು ಎಂದು ವಿಶ್ವ ಹಿಂದೂ ಪರಿಷತ್ ಅಂತರರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್ ಭಾಯಿ ತೊಗಾಡಿಯಾ ಒತ್ತಾಯಿಸಿದರು.ನಗರದ ನೂತನ ವಿದ್ಯಾಲಯದ ದತ್ತಾತ್ರೇಯ ಹೇರೂರಜಿ ಸಭಾಂಗಣದಲ್ಲಿ ಸೋಮವಾರ ವಿಹಿಂಪ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.ಉತ್ತರ ಪ್ರದೇಶ ಸರ್ಕಾರ ಮತ್ತು ಕೇಂದ್ರ ಸರ್ಕಾರ ಅಲ್ಪಸಂಖ್ಯಾತರಿಗೆ ಮೀಸಲಾತಿ ಕಲ್ಪಿಸಿವೆ. ಪಶ್ಚಿಮ ಬಂಗಾಲ ಸರ್ಕಾರವು ಮೌಲ್ವಿಗಳಿಗೆ ಮಾಸಿಕ ವೇತನ ನೀಡುತ್ತಿದೆ. ಹೀಗೆ ಬಹುಸಂಖ್ಯಾತರ ತೆರಿಗೆಯಲ್ಲಿ ಅಲ್ಪಸಂಖ್ಯಾತರು `ಜಿಹಾದ್' ನಡೆಸಲು ಸರ್ಕಾರಗಳೇ ಪೋಷಣೆ ನೀಡುತ್ತಿವೆ ಎಂದು ಆರೋಪಿಸಿದ ಅವರು, ಇನ್ನೊಂದೆಡೆ ದೇಶದಲ್ಲಿ ಸಾಯುತ್ತಿರುವ ಬಡ ಜನತೆಗೆ ನೆರವು ನೀಡಲು ಯಾರೂ ಬರುತ್ತಿಲ್ಲ ಎಂದು ಜರೆದರು.1986ರ ಶಹನಾಬಾನು ಪ್ರಕರಣದಲ್ಲಿ ದೇಶದ ಸರ್ವೋಚ್ಚ ನ್ಯಾಯಾಲಯದ ತೀರ್ಪಿಗೆ ವಿರುದ್ಧವಾಗಿ ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರವು ಸಂವಿಧಾನವನ್ನೇ ತಿದ್ದುಪಡಿ ಮಾಡಿತು. ಆದರೆ ಇಲ್ಲಿ ತನಕ ಬಹುಸಂಖ್ಯಾತರ ರಕ್ಷಣೆಗೆ ಮುಂದಾಗಿಲ್ಲ. ವಿಹಿಂಪದ ಪ್ರಮುಖ ಉದ್ದೇಶವೇ ಹಿಂದೂಗಳ ರಕ್ಷಣೆ. ಭಾರತವು ಹಿಂದೂ ರಾಷ್ಟ್ರ ಆಗಬೇಕು.ಪಾಕಿಸ್ತಾನದಲ್ಲಿ ಹಿಂದೂಗಳಿಗೆ ನೀಡಿದ ಸ್ಥಾನಮಾನವನ್ನು ಅವರಿಗೆ ನಾವಿಲ್ಲಿ ನೀಡಬೇಕು ಎಂದು ಅವರು ಹೇಳಿದರು. ವಿಹಿಂಪ ಘಟಕವನ್ನು ಜಿಲ್ಲೆಯಲ್ಲಿ ಸಂಘಟಿಸುವ ಬಗ್ಗೆ ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡಿದರು.ಬಸವರಾಜ ಅಪ್ಪ, ಸಿದ್ಧಲಿಂಗ ಸ್ವಾಮಿ, ಕೇಶವ ಹೆಗಡೆ, ಸುರೇಶ್ ಹೇರೂರ, ಆರ್.ಆರ್.ದೇಸಾಯಿ, ಲಕ್ಷ್ಮಣರಾವ್, ಮಲ್ಲಿಕಾರ್ಜುನ ಅದವಾನಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry