ರಾಮಾನುಜ ಪ್ರಬಂಧ ಕೈಬಿಡಲು ನಿರ್ಧಾರ

7

ರಾಮಾನುಜ ಪ್ರಬಂಧ ಕೈಬಿಡಲು ನಿರ್ಧಾರ

Published:
Updated:

ನವದೆಹಲಿ (ಪಿಟಿಐ): ಎ.ಕೆ.ರಾಮಾನುಜ ಅವರ ವಿವಾದಾತ್ಮಕ ಪ್ರಬಂಧವೊಂದನ್ನು ಇತಿಹಾಸ ಪಠ್ಯದಿಂದ ತೆಗೆದುಹಾಕಲು ದೆಹಲಿ ವಿವಿ ಶೈಕ್ಷಣಿಕ ಮಂಡಳಿ ನಿರ್ಧರಿಸಿದೆ.

 

`ತ್ರಿ ಹಂಡ್ರೆಡ್ ರಾಮಾಯಣಾಸ್~ ಪ್ರಬಂಧವನ್ನು ದೆಹಲಿ ವಿವಿ ಇತಿಹಾಸ ಪಠ್ಯದಲ್ಲಿ ಸೇರಿಸಿತ್ತು. ಆದರೆ ಇದು ಬಲಪಂಥೀಯ ಹಿಂದೂಗಳ ಭಾವನೆಗಳನ್ನು ಕೆರಳಿಸುವ ಸಾಧ್ಯತೆ ಎಂಬ ಅಭಿಪ್ರಾಯ ಹಲವರಿಂದ ವ್ಯಕ್ತವಾಗಿತ್ತು. ಸೋಮವಾರ ನಡೆದ ವಿವಿ ಶೈಕ್ಷಣಿಕ ಮಂಡಳಿಯಲ್ಲಿ ಈ ಬಗ್ಗೆ ಬಿಸಿಯೇರಿದ ಚರ್ಚೆ ನಡೆದಿದ್ದು, ನಂತರ ಪ್ರಬಂಧವನ್ನು ತೆಗೆದುಹಾಕಲು ತೀರ್ಮಾನ ಕೈಗೊಳ್ಳಲಾಯಿತು.ಆದರೆ ಈ ನಿರ್ಧಾರವನ್ನು ವಿವಿಯ ಕೆಲವರು ದುರದೃಷ್ಟಕರ ಎಂದು ಬಣ್ಣಿಸಿದರೆ, ಇನ್ನು ಕೆಲವರು ಉತ್ತಮ ನಿಲುವು ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry