ಮಂಗಳವಾರ, ಮೇ 17, 2022
27 °C

ರಾಮಾಯಣದ ಪಾತ್ರ ತಿರುಚುವಿಕೆ ಸರಿಯಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಮಖಂಡಿ: ನಮ್ಮಳಗಿನ ಗುಣಗಳನ್ನೇ ಧಾರಣ ಮಾಡಿಸಿ ಮಹರ್ಷಿ ವಾಲ್ಮೀಕಿ ರಾಮಾಯಣದಲ್ಲಿ ಸೃಷ್ಟಿಸಿರುವ ಪಾತ್ರಗಳನ್ನು ತಿರುಚಿ ಮತ್ತೊಂದು ರೀತಿಯಲ್ಲಿ ರಾಯಾಯಣ ಬರೆಯುವುದು ಸರಿಯಾದ ಕ್ರಮವಲ್ಲ ಎಂದು ನಿವೃತ್ತ ಪ್ರಾಧ್ಯಾಪಕ, ಹಿರಿಯ ಸಾಹಿತಿ ಡಾ.ಸಂಗಮೇಶ ಬಿರಾದಾರ ಅಭಿಪ್ರಾಯ ಪಟ್ಟರು.ಸ್ಥಳೀಯ ಬಿಎಲ್‌ಡಿ ಶಿಕ್ಷಣ ಸಂಸ್ಥೆಯ ವಾಣಿಜ್ಯ, ಬಿಎಚ್‌ಎಸ್ ಕಲೆ ಮತ್ತು ಟಿಜಿಪಿ ವಿಜ್ಞಾನ ಕಾಲೇಜಿನ ವಿದ್ಯಾರ್ಥಿ ಒಕ್ಕೂಟದ ಅಶ್ರಯದಲ್ಲಿ ಮಂಗಳವಾರ ಏರ್ಪಡಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.ರಾಮಾಯಣ ಘಟಿಸುವ ಪೂರ್ವದಲ್ಲಿಯೇ ರಾಮಾಯಣ ಬರೆದಿದ್ದ ಮಹರ್ಷಿ ವಾಲ್ಮೀಕಿ ಭವಿಷ್ಯತ್ತನ್ನು ರೂಪಿಸಿದ್ದರು. ಬಂಧುತ್ವ ಇರುವ ವರೆಗೂ ರಾಮಾಯಣ ಭ್ರಾತೃಪ್ರೇಮ ಸಾರುತ್ತಲಿರುತ್ತದೆ. ಹಾಗಾಗಿ ಭಾರತೀಯ ಸಂಸ್ಕೃತಿಗೆ ವಾಲ್ಮೀಕಿ ಮಹರ್ಷಿಗಳು ಕೊಟ್ಟ ಕೊಡುಗೆ ಅಪಾರ ಎಂದರು.ಪ್ರಾಚಾರ್ಯ ಡಾ.ಎಸ್.ಎಸ್.ಸುವರ್ಣಖಂಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಪಿ.ಎಸ್.ಹಿರೇಮಠ ವೇದಿಕೆಯಲ್ಲಿದ್ದರು. ಮಹೇಶ ಅಪ್ಪಣ್ಣವರ ಪ್ರಾರ್ಥನೆ ಗೀತೆ ಹಾಡಿದರು. ಬಿ.ಎಸ್.ಹೂಗಾರ ಭಕ್ತಿಗೀತೆ ಹೇಳಿದರು. ವಿದ್ಯಾರ್ಥಿ ಒಕ್ಕೂಟದ ಕಾರ್ಯಾಧ್ಯಕ್ಷ ಪ್ರೊ.ಎಸ್.ಬಿ.ಕಮತಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ.ಎಸ್.ಪಿ.ಮದ್ರೇಕರ ವಂದಿಸಿದರು.ನವಜಾತ ಶಿಶು ಹತ್ಯೆ ತಡೆಗೆ ಸಲಹೆ

ಬಾಗಲಕೋಟೆ: ನಗರದ ವಿವಿಧ ಕಡೆ ಸಿಗುತ್ತಿರುವ ನವಜಾತ ಶಿಶುಗಳ ಸಂಖ್ಯೆಯನ್ನು ತಡೆಯಲು ಪ್ರಜ್ಞಾವಂತ ನಾಗರಿಕರು ಕಾರ್ಯೋನ್ಮುಖರಾಗಬೇಕು ಎಂದು ನಗರಸಭೆ ತಿಳಿಸಿದೆ. ನಾಗರಿಕರು ತಮ್ಮ ಮಕ್ಕಳಿಗೆ ಸಾಮಾನ್ಯ ಶಿಕ್ಷಣದ ಜತೆಗೆ ನೈತಿಕ ಶಿಕ್ಷಣದ ಅರಿವು ಮೂಡಿಸಬೇಕು. ಮಕ್ಕಳಲ್ಲಿ ಲಿಂಗಭೇದ ಉಂಟಾಗದಂತೆ ನೋಡಿಕೊಳ್ಳಬೇಕು. ಮಕ್ಕಳಲ್ಲಿ ಪ್ರಾಪ್ತ ವಯಸ್ಸಿನಲ್ಲಿ ಮದುವೆ ಮಾಡುವುದು ಜವಾಬ್ದಾರಿಯುತ ನಾಗರಿಕರನ್ನಾಗಿಸುವದು ಮತ್ತು ರಾಷ್ಟ್ರದ ಪ್ರಗತಿ ಮುನ್ನಡೆಸಲು ಸಶಕ್ತರನ್ನಾಗಿಸುವುದು ಹಾಗೂ ಪ್ರಸವ ಸಮಯದಲ್ಲಿ ಆರೋಗ್ಯ ಕಾರ್ಯಕರ್ತೆಯರ ಸಹಾಯವನ್ನು ಕಡ್ಡಾಯವಾಗಿ ಪಡೆದು ಆ ಮೂಲಕ ಪ್ರಸವ ಸಮಯದಲ್ಲಿ ಜರುಗುವ ಶಿಸು ಮರಣಗಳನ್ನು ತಡೆಯುವದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಪೌರಾಯುಕ್ತರು ತಿಳಿಸಿದ್ದಾರೆ.ಸಮಗ್ರ ಯೋಗ ವರ್ಗ ಆರಂಭ

 ಬಾಗಲಕೋಟೆ: ವಿವೇಕಾನಂದ ಯೋಗ ವಿಜ್ಞಾನ ಕೇಂದ್ರದ ವತಿಯಿಂದ ಇದೇ 25 ವರೆಗೆ ಪ್ರತಿದಿನ ಸಂಜೆ 6ರಿಂದ 7ಗಂಟೆಯವರೆಗೆ ವಿದ್ಯಾಗಿರಿಯ 11ನೇ ರಸ್ತೆಯಲ್ಲಿರುವ ಕೇಂದ್ರದಲ್ಲಿ ಸಮಗ್ರ ಯೋಗ ಸಾಧನಾ ವರ್ಗಗಳು ನಡೆಯಲಿವೆ ಎಂದು ತಿಳಿಸಲಾಗಿದೆ.  15 ವರ್ಷ ಮೇಲ್ಟಟ್ಟ ಆಸಕ್ತರು ಎಸ್.ಕೆ.ಕುಪ್ಪಸ್ತ (ಮೊ:9242275893)ಅವರನ್ನು ಸಂಪರ್ಕಿಸಲು ತಿಳಿಸಲಾಗಿದೆ.ಎಸ್.ಎಸ್.ಕೆ. ಸಮಾಜದಿಂದ ನವರಾತ್ರಿ ಉತ್ಸವ

ಬಾಗಲಕೋಟೆ: ಸ್ಥಳೀಯ ಎಸ್.ಎಸ್.ಕೆ.ಸಮಾಜದಿಂದ ನವರಾತ್ರಿ ಉತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.ನವರಾತ್ರಿ ಉತ್ಸವದ ಅಂಗವಾಗಿ ಅಂಬಾಭವಾನಿ ದೇವಸ್ಥಾನದಲ್ಲಿ ದೇವಿಯನ್ನು ಅಲಂಕರಿಸಲಾಗಿತ್ತು. ಮಕ್ಕಳಿಂದ ವಿವಿಧ ಪ್ರಕಾರ ಮನರಂಜನಾ ಕಾರ್ಯಕ್ರಮಗಳು ನಡೆದವು. ಮಹಿಳೆಯರಿಗಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.ಸಿದ್ರಾಮಸಾ ದಾನಿ, ಶರದ್ ಕಲಬುರ್ಗಿ, ಚಂದುಲಾಲಸಾ ದಾಮಜಿ, ಪುಷ್ಪಾವತಿ ದೊಂಗಡಿ, ಗೋಪಲಸಾ ರಂಗರೇಜ, ರಾಜೇಶ ಮಗಜಿ, ವಿಜಯಾನಂದಸಾ ಗೊಂಗಲೆ, ವಿನಾಯಕ, ಕೊಡೆ, ಅಂಬಾಲ ಗೊಂಗಲೆ, ಹಣಮಂತ ನಿರಂಜನ,ಗುರು ಭಾಂಡಗೆ, ದೀಪಕ ಬಾಂಢಗೆ ಮತ್ತಿತರರು ಕಾರ್ಯಕ್ರಮ ನೇತೃತ್ವ ವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.