ಶನಿವಾರ, ಜೂನ್ 19, 2021
23 °C

ರಾಮುಲು ಜತೆ ಕೈಜೋಡಿಸಲು ಸಿದ್ಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೊರಬ: `ಮಾಜಿ ಸಚಿವ ಶ್ರೀರಾಮುಲು ಅವರಂತಹ ಸ್ವಾಭಿಮಾನಿ ಹೋರಾಟಗಾರರ ಅಗತ್ಯ ರಾಜ್ಯಕ್ಕೆ ಇದೆ. ಅವರು ಹೊಸ ಪಕ್ಷ ಕಟ್ಟುವುದಾದರೆ ಕೈ ಜೋಡಿಸಲು ಸಿದ್ಧ~ ಎಂದು ಬಿಜೆಪಿ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ಬಾಸೂರು ಚಂದ್ರೇಗೌಡ ಹೇಳಿದರು.

ಗದಗ್‌ನಲ್ಲಿ ಈಚೆಗೆ ರಾಮುಲು ಹಮ್ಮಿಕೊಂಡಿದ್ದ `ಉತ್ತರಕ್ಕಾಗಿ ಉಪವಾಸ~ ಕಾರ್ಯಕ್ರಮಕ್ಕೆ ಆಹ್ವಾನದ ಮೇರೆಗೆ ತಾವು ತೆರಳಿದ್ದಾಗಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ ಅವರು, ಸ್ವಾಭಿಮಾನಿಗಳೆಲ್ಲಾ ಸೇರಿ ಉತ್ತಮ ಪಕ್ಷ ಒಂದನ್ನು ಕಟ್ಟುವ ಅಗತ್ಯವಿದೆ.

ರಾಮುಲು ಅವರಲ್ಲಿ ಗಾಂಧಿ ವಿಚಾರಧಾರೆಗಳಿದ್ದು, ಅವರ ನಾಯಕತ್ವ ಬೆಳೆಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಸಂಘಟನೆ ಕಾರ್ಯ ಹಮ್ಮಿಕೊಳ್ಳಲು ಅಭಿಮಾನಿಗಳೊಂದಿಗೆ ತಾವು ತಯಾರಾಗಿರುವುದಾಗಿ ಘೋಷಿಸಿದರು.

ತಾಲ್ಲೂಕಿನಲ್ಲಿ ಪಕ್ಷ ಬೆಳೆಸಲು ತಮ್ಮನ್ನು ಸಂಪೂರ್ಣವಾಗಿ ಬಳಸಿಕೊಂಡ ಬಿಜೆಪಿ ಹಾಗೂ ಯಡಿಯೂರಪ್ಪ, ನಂತರ ಪಕ್ಷದಿಂದಲೇ ಹೊರ ಹಾಕಿದರು ಎಂದು ಆರೋಪಿಸಿದರು.

ರವಿಶಂಕರಗೌಡ ತತ್ತೂರು, ಗ್ರಾಮ ಪಂಚಾಯ್ತಿ ಸದಸ್ಯ ಡಿ.ಬಿ. ಶಿವಾನಂದಪ್ಪ (ಕಾತುವಳ್ಳಿ), ಡಿ.ಜಿ. ಹೆಗಡೆ, ಎಚ್. ಬಸವನಗೌಡ, ರಾಜೇಶ್ ಬೆನ್ನೂರು ಗೋಷ್ಠಿಯಲ್ಲಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.