ಶುಕ್ರವಾರ, ನವೆಂಬರ್ 15, 2019
20 °C

ರಾಮೋತ್ಸವದಲ್ಲಿ...

Published:
Updated:

ಶ್ರೀರಾಮ ಸೇವಾ ಮಂಡಳಿ: ಕೋಟೆ ಹೈಸ್ಕೂಲ್ ಆವರಣ. ಚಾಮರಾಜಪೇಟೆ. ಶನಿವಾರ ಬೆಳಿಗ್ಗೆ 8ರಿಂದ 9.30ರವರೆಗೆ ವಿದ್ಯಾವಾಚಸ್ಪತಿ ಡಾ. ಬನ್ನಂಜೆ ಗೋವಿಂದಾಚಾರ್ಯ ಅವರಿಂದ `ರಾಮನ ಚಾರಿತ್ರ್ಯ' ಕುರಿತು ಉಪನ್ಯಾಸ.ಸಂಜೆ 5.15ಕ್ಕೆ ತೇಜಸ್ ಮಂಜುನಾಥ್ ಮತ್ತು ಪ್ರಣವ್ ಮಂಜುನಾಥ್ ಅವರಿಂದ ದ್ವಂದ್ವ ಪಿಟೀಲು ವಾದನ. 6.30ಕ್ಕೆ ಸಂಜಯ್ ಸುಬ್ರಹ್ಮಣ್ಯನ್ ಕಛೇರಿ. ಎಸ್. ವರದರಾಜನ್, ನೈವೇಲಿ ವೆಂಕಟೇಶ್ ಮತ್ತು ಬಿ.ರಾಜಶೇಖರ್ ನೆರವು.ರಾಮಸೇವಾ ಮಂಡಳಿಯ ಸಂಸ್ಥಾಪಕರ ದಿನಾಚರಣೆ

ಚಾಮರಾಜಪೇಟೆಯ ಕೋಟೆ ಹೈಸ್ಕೂಲ್ ಆವರಣದಲ್ಲಿ ಶ್ರೀರಾಮ ಸೇವಾ ಮಂಡಳಿ ಆಶ್ರಯದಲ್ಲಿ ನಡೆದಿರುವ 75ನೇ ವರ್ಷ ರಾಮನವಮಿ ಸಂಗೀತೋತ್ಸವಕ್ಕೆ ವಿಶೇಷ ಸಂಭ್ರಮ. ಭಾನುವಾರದಂದು ಮಂಡಳಿಯ ಸಂಸ್ಥಾಪಕರ ದಿನಾಚರಣೆ. ಈ ಹಿನ್ನೆಲೆಯಲ್ಲಿ ಎಂಟು ಮಂದಿ ಸಾಧಕರನ್ನು ಸನ್ಮಾನಿಸಲಾಗುವುದು. ಸಂಸ್ಥಾಪಕರ ದಿನದ ಹಿನ್ನೆಲೆಯಲ್ಲಿ ಭಾನುವಾರದ ಕಾರ್ಯಕ್ರಮಗಳಿಗೆ ಸಾರ್ವಜನಿಕರಿಗೆ ಮುಕ್ತ ಪ್ರವೇಶವಿರುತ್ತದೆ.ಎಂದಿನಂತೆ ಬೆಳಿಗ್ಗೆ 8ರಿಂದ 9.30ರವರೆಗೆ ವಿದ್ಯಾ ವಾಚಸ್ಪತಿ ಡಾ. ಬನ್ನಂಜೆ ಗೋವಿಂದಾಚಾರ್ಯ ಅವರಿಂದ `ರಾಮನ ಚಾರಿತ್ರ್ಯ' ಕುರಿತು ಉಪನ್ಯಾಸ.ಸಂಜೆ 4ಕ್ಕೆ ಲಕ್ಷ್ಮಣ ಎಂ. ತಂಡದಿಂದ ನಾದಸ್ವರ ವಾದನ. 6.15ಕ್ಕೆ ಸಂಸ್ಥಾಪಕರ ದಿನಾಚರಣೆ. ಸಂಜೆ 7.30ಕ್ಕೆ ಡಾ. ನಿತ್ಯಶ್ರೀ ಮಹಾದೇವನ್ ಮತ್ತು ತಂಡದವರಿಂದ ಕಛೇರಿ.

ಪ್ರತಿಕ್ರಿಯಿಸಿ (+)