ಸೋಮವಾರ, ಆಗಸ್ಟ್ 19, 2019
28 °C

ರಾಮ್‌ಚರಣ್ ಹೊಸ ಕಸರತ್ತು

Published:
Updated:

ಟಾಲಿವುಡ್‌ನ ಮೆಗಾಸ್ಟಾರ್ ಚಿರಂಜೀವಿ ಅವರ ಮಗ ರಾಮ್‌ಚರಣ್ ತೇಜ ತಮ್ಮ ಮೊದಲ ಬಾಲಿವುಡ್ ಸಿನಿಮಾ `ಜಂಝೀರ್'ಗಾಗಿ ಸಾಕಷ್ಟು ಕಸರತ್ತು ನಡೆಸುತ್ತಿದ್ದಾರಂತೆ.`ಜಂಝೀರ್' ಚಿತ್ರದಲ್ಲಿ ಖಡಕ್ ಪೊಲೀಸ್ ಪಾತ್ರದಲ್ಲಿ ಕಾಣಸಿಕೊಳ್ಳಲಿರುವ ರಾಮ್ ಚರಣ್, ಕಟ್ಟುಮಸ್ತಾದ ದೇಹಕ್ಕಾಗಿ ಆಸ್ಟ್ರೇಲಿಯಾದ ಫಿಟ್‌ನೆಸ್ ತರಬೇತುದಾರರಿಂದ ಪಾಠ ಹೇಳಿಸಿಕೊಂಡು ಅಣಿಯಾಗುತ್ತಿದ್ದಾರೆ. ಮೂರರಿಂದ ನಾಲ್ಕು ಗಂಟೆ ಕಠಿಣ ಅಭ್ಯಾಸದಲ್ಲಿ ತೊಡಗಿರುವ ಅವರು ಫಿಟ್‌ನೆಸ್ ಕಸರತ್ತಿನಿಂದ ಶೂಟಿಂಗ್ ಹಾಗೂ ಇನ್ನಾವುದೇ ಕೆಲಸಗಳಿಗೆ ತೊಂದರೆ ಉಂಟಾಗುವುದಿಲ್ಲ ಎಂದೂ ಹೇಳಿದ್ದಾರೆ. `ಜಂಝೀರ್' ಬಾಲಿವುಡ್‌ನ ಬಿಗ್-ಬಿ ಅಮಿತಾಭ್ ಬಚ್ಚನ್ ಅಭಿನಯಿಸಿದ ಚಿತ್ರದ ಮರುಸೃಷ್ಟಿ ಆಗಿದ್ದು, ಬಿಗ್-ಬಿ ನಟಿಸಿದ್ದ ಪೊಲೀಸ್ ಪಾತ್ರದಲ್ಲಿ ರಾಮ್‌ಚರಣ್ ಕಾಣಿಸಿಕೊಳ್ಳಲಿದ್ದಾರೆ. ಸೆ. 6ರಂದು ತೆರೆಕಾಣಲಿರುವ ಈ ಚಿತ್ರದಲ್ಲಿ ನಟಿ ಪ್ರಿಯಾಂಕಾ ಚೋಪ್ರಾ, ಸಂಜಯ್ ದತ್, ಪ್ರಕಾಶ್ ರಾಜ್ ಹಾಗೂ ಮಾಹಿ ಗಿಲ್ ಅಭಿನಯಿಸಿದ್ದಾರೆ.

 

Post Comments (+)