ರಾಮ್ದೇವ್ಗೆ ಅಜಿತ್ ಸಿಂಗ್ ಬೆಂಬಲ
ನವದೆಹಲಿ (ಪಿಟಿಐ): ಕಪ್ಪು ಹಣ ಮತ್ತು ಭ್ರಷ್ಟಾಚಾರದ ವಿರುದ್ಧ ಚಳವಳಿ ಆರಂಭಿಸಿರುವ ರಾಮ್ದೇವ್ ಅವರಿಗೆ ಕಾಂಗ್ರೆಸ್ ಮಿತ್ರ ಪಕ್ಷವಾದ ಆರ್ಎಲ್ಡಿ ಬೆಂಬಲ ನೀಡಿದೆ.
ಮುಂಗಾರು ಅಧಿವೇಶದಲ್ಲಿ ಈ ಬಗ್ಗೆ ಹೊಸ ಪ್ರಸ್ತಾವನೆ ಮಂಡಿಸುವುದಾಗಿ ಆರ್ಎಲ್ಡಿ ಮುಖ್ಯಸ್ಥ ಅಜಿತ್ ಸಿಂಗ್ ಅವರು ತಮ್ಮನ್ನು ಗುರುವಾರ ಭೇಟಿಯಾದ ರಾಮ್ದೇವ್ ಅವರಿಗೆ ಹೇಳಿದ್ದಾರೆ.
ಆ ಬಳಿಕ ಮಾತನಾಡಿದ ಅಜಿತ್ ಸಿಂಗ್, ಚುನಾವಣೆಯಲ್ಲಿ ಹರಿಯುತ್ತಿರುವ ಕಪ್ಪುಹಣದಿಂದ ಪ್ರಜಾಪ್ರಭುತ್ವಕ್ಕೆ ಭಾರಿ ಪೆಟ್ಟು ಬೀಳುತ್ತಿದೆ ಎಂದಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.