ಮಂಗಳವಾರ, ಮೇ 18, 2021
22 °C

ರಾಮ್‌ದೇವ್ ಅನುಯಾಯಿಗಳ ಮೇಲೆ ಕಣ್ಣು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ಆದಾಯ ತೆರಿಗೆ ಅಧಿಕಾರಿಗಳ ಕಣ್ಣು ಇದೀಗ ವಾಣಿಜ್ಯ ನಗರಿಯ ರಿಯಲ್ ಎಸ್ಟೇಟ್ ಉದ್ಯಮಿಗಳ ಮೇಲೆ ನೆಟ್ಟಿದೆ. ಹಿಂದೊಮ್ಮೆ ಬಿಯರ್ ಬಾರ್ ಮಾಲೀಕರಾಗಿದ್ದ, ಇದೀಗ ಬಾಬಾ ರಾಮ್‌ದೇವ್ ಅವರ ಅನುಯಾಯಿ ಆಗಿರುವ ಸುಧಾಕರ ಶೆಟ್ಟಿ ಎಂಬುವವರ ಕಚೇರಿ ಮೇಲೆ ಗುರುವಾರ ಅಧಿಕಾರಿಗಳು ದಾಳಿ ನಡೆಸಿದರು.ಶೆಟ್ಟಿ ಅವರ ವ್ಯವಹಾರ ಪಾಲುದಾರ ದರ್ಶನ್ ಬಿಲ್ಡರ್ಸ್ ಮೇಲೂ ಅಧಿಕಾರಿಗಳು ಜಾಲ ಬೀಸಿದ್ದಾರೆ.

ನಗರದಲ್ಲಿ ಹಲವು ಕಡೆ ಇರುವ ರಿಯಲ್ ಎಸ್ಟೇಟ್ ಉದ್ಯಮಿಗಳ ಕಚೇರಿಗಳಲ್ಲಿ ಶೋಧ ಕಾರ್ಯ ನಡೆಸಲಾಯಿತು.ಶೆಟ್ಟಿ ಹಾಗೂ ಇತರ ಬಿಲ್ಡರ್‌ಗಳ ಬಳಿ ಇರುವ ಬೇನಾಮಿ ಹಣ ಪತ್ತೆಗಾಗಿ ಈ ಶೋಧ ನಡೆಯುತ್ತಿದೆ ಎನ್ನಲಾಗಿದೆ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಮೂರಕ್ಕೂ ಹೆಚ್ಚು ತಂಡ ವಿವಿಧ ಕಡೆ ದಾಳಿ ನಡೆಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.ದೇಶದಾದ್ಯಂತ ಬಾಬಾ ರಾಮ್‌ದೇವ್ ಹಾಗೂ ಅವರ ಸಹಾಯಕರು ಕೈಗೊಂಡಿರುವ ವಿವಿಧ ಯೋಜನೆಗಳಿಗೆ ಅಕ್ರಮ ಹಣ ಬಳಕೆಯಾಗಿದೆಯೇ ಎನ್ನುವುದನ್ನು ಪತ್ತೆ ಹಚ್ಚಲು ಈ ರಹಸ್ಯ ದಾಳಿ ನಡೆಸಲಾಗುತ್ತಿದೆ ಎನ್ನಲಾಗುತ್ತಿದೆ.  ಆದಾಯ ತೆರಿಗೆ ಉನ್ನತಾಧಿಕಾರಿಗಳು ಈ ವಿಷಯವನ್ನು  ಖಚಿತಪಡಿಸಿಲ್ಲ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.