ರಾಮ್‌ದೇವ್ ನಿರಶನ ಖಚಿತ

ಶನಿವಾರ, ಜೂಲೈ 20, 2019
28 °C

ರಾಮ್‌ದೇವ್ ನಿರಶನ ಖಚಿತ

Published:
Updated:

ನವದೆಹಲಿ (ಪಿಟಿಐ/ಐಎಎನ್‌ಎಸ್): ದೇಶದಲ್ಲಿ ಹೆಚ್ಚುತ್ತಿರುವ ಭ್ರಷ್ಟಾಚಾರ ಮತ್ತು ಕಪ್ಪು ಹಣದ ವಿರುದ್ಧ ಸಮರ ಸಾರಿರುವ ಯೋಗ ಗುರು ಬಾಬಾ ರಾಮ್‌ದೇವ್ ಅವರು, ಜೂನ್ ನಾಲ್ಕರಿಂದ ಆಮರಣ ಉಪವಾಸ ಸತ್ಯಾಗ್ರಹ ನಡೆಸುವ ತಮ್ಮ ನಿರ್ಧಾರಕ್ಕೆ ಅಂಟಿಕೊಂಡಿದ್ದಾರೆ.

"

ರಾಮ್‌ದೇವ್ ಅವರ ನಿಲುವಿನಿಂದ ಎಚ್ಚೆತ್ತುಕೊಂಡಿರುವ ಕೇಂದ್ರ,      ಬುಧವಾರ           ಮಧ್ಯಾಹ್ನ   ಮಧ್ಯಪ್ರದೇಶದಿಂದ ದೆಹಲಿಗೆ ಆಗಮಿಸಿದ ಯೋಗಗುರುವಿನ ಮನಪರಿವರ್ತಿಸುವ ಸಲುವಾಗಿ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರ ನೇತೃತ್ವದಲ್ಲಿ ನಾಲ್ವರು ಸಚಿವರನ್ನು ವಿಮಾನ ನಿಲ್ದಾಣಕ್ಕೆ ಕಳುಹಿಸಿ ಸುಮಾರು ಎರಡೂವರೆ ತಾಸು ಮಾತುಕತೆ ನಡೆಸಿತು.ಆದರೆ ಸಚಿವರೊಂದಿಗೆ ಮಾತುಕತೆ ನಡೆಸಿದ ಬಳಿಕ ಮಾತನಾಡಿದ ರಾಮ್‌ದೇವ್, ತಮ್ಮ ಉದ್ದೇಶಿತ ಉಪವಾಸ ಮುಷ್ಕರ ನಿಗದಿಯಂತೆಯೇ ರಾಮಲೀಲಾ ಮೈದಾನದಲ್ಲಿ ನಡೆಯಲಿದೆ ಎಂದು ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry