ರಾಮ್‌ದೇವ್ ಹೋರಾಟ ಬೆಂಬಲಿಸಿ ಧರಣಿ

ಭಾನುವಾರ, ಜೂಲೈ 21, 2019
22 °C

ರಾಮ್‌ದೇವ್ ಹೋರಾಟ ಬೆಂಬಲಿಸಿ ಧರಣಿ

Published:
Updated:

ಭದ್ರಾವತಿ: ವಿದೇಶಿ ಬ್ಯಾಂಕ್‌ನಲ್ಲಿನ ಕಪ್ಪುಹಣ ವಾಪಸ್ ತರಿಸಬೇಕು  ಎಂದು ಆಗ್ರಹಿಸಿ ಹಾಗೂ ಈ ಹೋರಾಟದ ನಾಯಕರಾದ ಬಾಬಾ ರಾಮ್‌ದೇವ್ ಬಂಧನ ಖಂಡಿಸಿ ಮಂಗಳವಾರ ಧರಣಿ ಸತ್ಯಾಗ್ರಹ ನಡೆಯಿತು.ಪತಂಜಲಿ ಯೋಗ ಪೀಠ ಹಾಗೂ ಭಾರತ್ ಸ್ವಾಭಿಮಾನ್ ಟ್ರಸ್ಟ್ ಕಾರ್ಯಕರ್ತರು ಇಲ್ಲಿನ ಮಾಧವಚಾರ್ ವೃತ್ತದಿಂದ ತಾ.ಪಂ ಕಚೇರಿ ತನಕ ಮೆರವಣಿಗೆ ನಡೆಸಿ ಸಾಂಕೇತಿಕ ಧರಣಿ ನಡೆಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು ದೇಶದ ಭ್ರಷ್ಟ ವ್ಯವಸ್ಥೆ ಸರಿ ಮಾಡುವ ನಿಟ್ಟಿನಲ್ಲಿ ರಾಮ್‌ದೇವ್ ನಡೆಸಿರುವ ಹೋರಾಟ ಜನಪರ ಕಾಳಜಿ ಹೊಂದಿದೆ. ಆದರೆ ಅಧಿಕಾರಶಾಹಿ ಆಡಳಿತ ಅದರ ದಮನಕ್ಕೆ ಮುಂದಾಗಿರುವುದು ಖಂಡನೀಯ ಎಂದು ಕಿಡಿಕಾರಿದರು.ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು. ಅನ್ನಪೂರ್ಣಾ ಸತೀಶ್, ಹಾ.ರಾಮಪ್ಪ, ಪ್ರೇಮಾ, ಮೇಧಾವತಿ, ಜಯರಾಂ, ಕೊಡ್ಲುಯಜ್ಞಯ್ಯ, ಹಾ.ರಾಮಪ್ಪ, ಗೀತಾ, ಶೈಲೇಶ್‌ಕೋಠಿ ಇತರರು ಪ್ರತಿಭಟನೆ ನೇತೃತ್ವ ವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry