ರಾಯಚೂರಿಗೆ ವೋಲ್ವೊ ಬಸ್

7

ರಾಯಚೂರಿಗೆ ವೋಲ್ವೊ ಬಸ್

Published:
Updated:

ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ನಿಗಮವು ಇದೇ 31ರಿಂದ ಬೆಂಗಳೂರು ಮತ್ತು ರಾಯಚೂರು ನಡುವೆ ಹೊಸ `ಐರಾವತ~ (ವೋಲ್ವೊ) ಬಸ್ ಸೇವೆ ಆರಂಭಿಸಲಿದೆ.ರಾತ್ರಿ 9.30ಕ್ಕೆ ಬೆಂಗಳೂರಿನಿಂದ ಹೊರಡಲಿರುವ ಬಸ್ಸು, ಬೆಳಿಗ್ಗೆ 5.30ಕ್ಕೆ ರಾಯಚೂರು ತಲುಪಲಿದೆ. ರಾಯಚೂರಿನಿಂದ ರಾತ್ರಿ 9.30ಕ್ಕೆ ಹೊರಟು  ಬೆಳಿಗ್ಗೆ 5.30ಕ್ಕೆ ಬೆಂಗಳೂರು ತಲುಪಲಿದೆ ಎಂದು ನಿಗಮದ ಪ್ರಕಟಣೆ ತಿಳಿಸಿದೆ. ಈ ಬಸ್ಸುಗಳಿಗೆ ಗರಿಷ್ಠ 30 ದಿನ ಮುಂಚಿತವಾಗಿ ಟಿಕೆಟ್ ಕಾಯ್ದಿರಿಸಬಹುದು.ದಂಡ ವಸೂಲು: ನಿಗಮದ ವಿಶೇಷ ತನಿಖಾ ತಂಡವು ಇದೇ ಸೆಪ್ಟೆಂಬರ್‌ನಲ್ಲಿ  8,860 ಮಂದಿ ಟಿಕೆಟ್ ರಹಿತ ಪ್ರಯಾಣಿಕರಿಂದ ಒಟ್ಟು ರೂ 7,75,933  ದಂಡ ವಸೂಲು ಮಾಡಿದೆ. ಅಲ್ಲದೆ, ಆದಾಯದಲ್ಲಿ ರೂ 99,332 ಸೋರಿಕೆ ಆಗುತ್ತ್ದ್ದಿದುದನ್ನು ಪತ್ತೆಮಾಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry