ಭಾನುವಾರ, ಮೇ 9, 2021
28 °C

ರಾಯಚೂರು:ಬಿತ್ತನೆ ಕಾರ್ಯ ಶುರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ಜಿಲ್ಲೆಯಾದ್ಯಂತ ಒಂದು ವಾರದಲ್ಲಿ ಬಿದ್ದ ಮುಂಗಾರು ಪೂರ್ವ ಮಳೆಯಿಂದಾಗಿ ವಿವಿಧ ಬೆಳೆಯ  ಬಿತ್ತನೆ ಕಾರ್ಯಕ್ಕೆ ರೈತರು ಅಲ್ಲಲ್ಲಿ ಮುಂದಾಗಿದ್ದಾರೆ.ಮುಂಗಾರು ಬಿತ್ತನೆಗೆ ರೈತರು ಬಿತ್ತನೆ ಬೀಜ, ರಸಗೊಬ್ಬರ ಸಿದ್ಧತೆ ಮಾಡಿಕೊಳ್ಳುವಷ್ಟರಲ್ಲಿ ಮುಂಗಾರು ಪೂರ್ವ ಮಳೆ ಸುರಿದಿದ್ದು ಜಮೀನು ಹದಗೊಳಿಸಲು ರೈತರಿಗೆ ಅನುಕೂಲವಾಗಿದೆ. ಕೆಲ ಕಡೆ ರೈತರು ಹತ್ತಿ ಬೀಜ ಬಿತ್ತನೆ ಕಾರ್ಯ ಕೈಗೊಂಡಿದ್ದಾರೆ.

`ಕಳೆದ ವರ್ಷಕ್ಕಿಂತ ಈ ವರ್ಷ ಮುಂಗಾರು ಪೂರ್ವ ಮಳೆ ರಭಸವಾಗಿಯೇ ಸುರಿದಿರುವುದು ಕೃಷಿ ಚಟುವಟಿಕೆಗೆ ಅನುಕೂಲವಾಗಿದೆ.ಈಗಲೇ ಬಿತ್ತಲು ಹೊರಟರೆ ಮೊದಲೇ ಬಿತ್ತನೆ ಶುರು ಮಾಡಿದಂತಾಗುತ್ತದೆ. ಆದರೆ,  ವಿವಿಧ ಬೆಳೆಯ ಬೀಜ ಬಿತ್ತನೆಯನ್ನು ಬೇರೆ ಬೇರೆ ಹೊಲಗಳಲ್ಲಿ ಮಾಡಬೇಕಾದ ರೈತರಿಗೆ ಮುಂಚಿತವಾಗಿ ಬಿತ್ತನೆ ಕಾರ್ಯ ಶುರು ಮಾಡುವುದು ಅನುಕೂಲ ಆಗುತ್ತದೆ' ಎಂದು ಯಕ್ಲಾಸಪುರ ಗ್ರಾಮದ ರೈತ ದೊಡ್ಡನಗೌಡ ಹೇಳಿದರು.ರಸಗೊಬ್ಬರ ಬೆಲೆ 1200ಕ್ಕಿಂತ ಹೆಚ್ಚಾಗಿದೆ. ಬಿತ್ತನೆ ಬೀಜ ದುಬಾರಿಯಾಗಿದೆ. ಗುಣಮಟ್ಟದ ಬಿತ್ತನೆ ಬೀಜ ಗುರುತಿಸುವುದೇ ಕಷ್ಟ. ಬಿತ್ತನೆ ಮಾಡಿದ ಬಳಿಕ ಬೆಳೆಯುತ್ತದೆ. ಆದರೆ ಇಳುವರಿ ಬರುವುದಿಲ್ಲ. ರೈತರಿಗೆ ನಷ್ಟವಾಗುತ್ತದೆ. ಬಿತ್ತನೆ ಮಾಡಿದ ಬಳಿಕ ಬೆಳೆ ಚೆನ್ನಾಗಿ ಬೆಳೆದಿದೆಯಲ್ಲ ಎಂಬ ವಾದ ಕಂಪೆನಿಗಳು ಇಡುತ್ತವೆ. ರೈತರೇ ನಷ್ಟ ಅನುಭವಿಸಬೇಕು. ಹೀಗಾಗಿ ಗುಣಮಟ್ಟದ ಬಿತ್ತನೆ ಬೀಜ ಆಯ್ಕೆ ಮಾಡಬೇಕು ಎಂದು  ತಿಳಿಸಿದರು.ಜಿಲ್ಲೆಯಲ್ಲಿ ಬತ್ತ, ಸಜ್ಜೆ, ತೊಗರಿ, ಸೂರ್ಯಕಾಂತಿ ಮತ್ತು ಹತ್ತಿ ಮುಂಗಾರು ಹಂಗಾಮಿನ ಪ್ರಮುಖ ಬೆಳೆಗಳಾಗಿವೆ. 31,700 ಕ್ವಿಂಟಲ್ ಬಿತ್ತನೆ ಬೀಜ, 87, 131 ಮೆಟ್ರಿಕ್ ಟನ್ ರಸಗೊಬ್ಬರ ಜಿಲ್ಲೆಯಲ್ಲಿ ಸಂಗ್ರಹ ಇದೆ. ಬಿತ್ತನೆ ಬೀಜ ಮತ್ತು ರಸಗೊಬ್ಬರ ಕೊರತೆ ಇಲ್ಲ ಎಂದು ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.