ಸೋಮವಾರ, ಮೇ 17, 2021
30 °C

ರಾಯಚೂರು ವಿದ್ಯುತ್ ಕೇಂದ್ರ: ಯಥಾಸ್ಥಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು:ಕೃಷ್ಣಾ ನದಿಯಲ್ಲಿ ನೀರಿನ ಕೊರತೆಯಿಂದ ನಾಲ್ಕು ಘಟಕಗಳು ಸ್ಥಗಿತಗೊಂಡಿರುವ ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರದಲ್ಲಿ ಯಥಾಸ್ಥಿತಿ ಮಂಗಳವಾರ ಮುಂದುವರಿದಿದೆ.  ನಾಲ್ಕು ಘಟಕಗಳನ್ನು ಸೋಮವಾರ ಸ್ಥಗಿತಗೊಳಿಸಲಾಗಿತ್ತು.  ಈಗ 700 ಮೆಗಾವಾಟ್ ವಿದ್ಯುತ್ ಮಾತ್ರ ಉತ್ಪಾದನೆಯಾಗುತ್ತಿದೆ.ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ ಈಗಾಗಲೇ ನೀರು ಬಿಡಲಾಗಿದೆ. ನೀರು ಶಕ್ತಿನಗರದ ಬಳಿ ತಲುಪಿದ ನಂತರ ನಾಲ್ಕು ಘಟಕಗಳು ವಿದ್ಯುತ್ ಉತ್ಪಾದನೆ ಪುನರಾರಂಭಿಸಲಿವೆ ಎಂದು ಆರ್‌ಟಿಪಿಎಸ್ ಕಾರ್ಯನಿರ್ವಾಹಕ ನಿರ್ದೇಶಕ ಭಾಸ್ಕರ್ `ಪ್ರಜಾವಾಣಿ~ಗೆ ತಿಳಿಸಿದರು.2500 ಕ್ಯೂಸೆಕ್ ನೀರು:

ಹುಣಸಗಿ (ಯಾದಗಿರಿ ಜಿಲ್ಲೆ) ವರದಿ: ರಾಯಚೂರಿನ ಆರ್.ಟಿ.ಪಿ.ಎಸ್.ಗೆ ನೀರು ಒದಗಿಸುವ ಉದ್ದೇಶದಿಂದ ನಾರಾಯಣಪುರ ಜಲಾಶಯದಿಂದ ಸೋಮವಾರ ತಡರಾತ್ರಿ 2 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದೆ. ಮಂಗಳವಾರ ಇನ್ನೂ 500 ಕ್ಯೂಸೆಕ್ ಹೆಚ್ಚುವರಿ ನೀರನ್ನು ಬಿಡಲಾಗಿದೆ.ಹೆಚ್ಚುವರಿ ನೀರು ಬಿಟ್ಟ ಕಾರಣ ಬುಧವಾರ ರಾತ್ರಿ ವೇಳೆಗೆ ನೀರು ಶಕ್ತಿನಗರ ತಲುಪುವ ಸಾಧ್ಯತೆ ಇದೆ ಎಂದು ಕೃಷ್ಣಾ ಭಾಗ್ಯ ಜಲ ನಿಗಮದ ಮೂಲಗಳು ತಿಳಿಸಿವೆ.  ಆಲಮಟ್ಟಿಯಿಂದ ಅರ್ಧ ಟಿಎಂಸಿ ನೀರು ನಾರಾಯಣಪುರ ಜಲಾಶಯಕ್ಕೆ ಬರುವ ನಿರೀಕ್ಷೆ ಇದೆ ಎಂದೂ ಈ ಮೂಲಗಳು ತಿಳಿಸಿವೆ.ನಾರಾಯಣಪುರ ಮತ್ತು ಆಲಮಟ್ಟಿ ಜಲಾಶಯಗಳಲ್ಲಿ ಒಟ್ಟು 7 ಟಿ.ಎಂ.ಸಿ ನೀರು ಸಂಗ್ರಹವಿದೆ. ಜಲಾಶಯದಲ್ಲಿ 487 ಮೀಟರ್ ನೀರು  ಕಾಯ್ದುಕೊಂಡಲ್ಲಿ ಇಳಕಲ್, ಮುದ್ದೇಬಿಹಾಳ, ಕುಷ್ಟಗಿ, ನಾಲತವಾಡ ಸೇರಿದಂತೆ ಸುಮಾರು 30 ಪಟ್ಟಣಗಳಿಗೆ ಕುಡಿಯುವ ನೀರು ಲಭ್ಯವಾಗಲಿದೆ. ಈ ಮಟ್ಟಕ್ಕಿಂತ ನೀರು ಕಡಿಮೆ ಆದಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಲಿದೆ ಎಂದು ಮೂಲಗಳು ತಿಳಿಸಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.