ಗುರುವಾರ , ನವೆಂಬರ್ 21, 2019
26 °C

ರಾಯಚೂರು: ್ಙ 6.75 ಲಕ್ಷ ಜಪ್ತಿ

Published:
Updated:

ರಾಯಚೂರು: ಜಿಲ್ಲೆಯಲ್ಲಿ ಕಳೆದ 24 ತಾಸುಗಳಲ್ಲಿ  ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 6.75 ಲಕ್ಷ ರೂಪಾಯಿಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸೋಮವಾರ ಮಧ್ಯಾಹ್ನ ನಗರದ ನವೋದಯ ಪೊಲೀಸ್ ಚೆಕ್‌ಪೋಸ್ಟ್‌ನಲ್ಲಿ ಇನ್ನೋವಾ ಕಾರ್ ತಪಾಸಣೆ ಮಾಡಿದಾಗ ರೂ 5.25 ಲಕ್ಷ  ಪತ್ತೆಯಾಗಿದೆ. ರಾಯಚೂರು ಜ್ಯೋತಿ ಕಾಲೊನಿ ನಿವಾಸಿ ರಂಗಯ್ಯ ಎಂಬುವವರು ಈ ಹಣವನ್ನು ತೆಗೆದುಕೊಂಡು ಹೊರಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.ಇದೇ ಚೆಕ್‌ಪೋಸ್ಟ್‌ನಲ್ಲಿ ಮುಂಜಾನೆ ಸ್ಕಾರ್ಪಿಯೊ ವಾಹನ ತಪಾಸಣೆ ಮಾಡಿದಾಗ 50 ಸಾವಿರ ಪತ್ತೆಯಾಗಿದೆ. ನಗರದ ನಿವಾಸಿ ಪ್ರಕಾಶ ಶಿವಶಂಕರ ಎಂಬುವವರು ಈ ಹಣ ತೆಗೆದುಕೊಂಡು ಹೊರಟಿದ್ದರು. ಎರಡೂ ಪ್ರಕರಣಗಳಲ್ಲಿ ಹಣ ಜಪ್ತಿ ಮಾಡಿ ಸಂಬಂಧಪಟ್ಟವರನ್ನು ವಿಚಾರಣೆ ಮಾಡಲಾಗುತ್ತಿದೆ ಎಂದು ನೇತಾಜಿ ನಗರ ಪೊಲೀಸ್ ಠಾಣೆ ಅಧಿಕಾರಿಗಳು ಹೇಳಿದ್ದಾರೆ.ಭಾನುವಾರ ಸಂಜೆ ಸಿಂಧನೂರು ಸಮೀಪ ಧಡೇಸುಗೂರು ಹತ್ತಿರ ಚೆಕ್‌ಪೋಸ್ಟ್‌ನಲ್ಲಿ 1 ಲಕ್ಷ ಮೊತ್ತವನ್ನು ಪೊಲೀಸರು ಜಪ್ತಿ ಮಾಡಿದ್ದರು.

ಪ್ರತಿಕ್ರಿಯಿಸಿ (+)