ರಾಯರ ಮೃತ್ತಿಕಾವೃಂದಾವನ ಉತ್ಸವ
ಗುಲ್ಬರ್ಗ: ಬಿದ್ದಾಪುರ ಕಾಲೊನಿಯ ರಾಘವೇಂದ್ರ ರಾಯರ ಮಠದಲ್ಲಿ ಭಾನುವಾರ ರಾಯರ ಮೃತ್ತಿಕಾ ವೃಂದಾವನ ವಾರ್ಷಿಕೋತ್ಸವ , ಜಯತೀರ್ಥರ ಆರಾಧನೆ ವೈಭವದಿಂದ ನಡೆಯಿತು.
ಅಷ್ಟೋತ್ತರ, ಭಜನೆ, ವಿಶೇಷ ಅಲಂಕಾರ ನಡೆಯಿತು. ಭಂಡಾರಕೇರಿ ಮಠಾಧೀಶರಿಂದ ತೊಟ್ಟಿಲು ಸೇವೆ ಹಾಗೂ ಉಪನ್ಯಾಸ ನಡೆಯಿತು.
ನವಲಿ ಕೃಷ್ಣಾಚಾರ್ಯ ಅಧ್ಯಕ್ಷತೆ ವಹಿಸಿದ್ದರು. ವ್ಯವಸ್ಥಾಪಕ ಕನಕಗಿರಿ ಗುರುರಾಜಾಚಾರ್ಯ, ಬಡಾವಣೆಯ ಪ್ರಮುಖರು ಪಾಲ್ಗೊಂಡಿದ್ದರು. ಅನ್ನಸಂತರ್ಪಣೆ ನಡೆಯಿತು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.