ಮಂಗಳವಾರ, ನವೆಂಬರ್ 19, 2019
23 °C

ರಾಯಲ್ಸ್‌ಗೆ ತಲೆಬಾಗಿದ ಮುಂಬೈ ಇಂಡಿಯನ್ಸ್

Published:
Updated:

ಜೈಪುರ (ಪಿಟಿಐ): ಆರಂಭಿಕ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆ ಅವರ ಜವಾಬ್ದಾರಿಯುತ ಬ್ಯಾಟಿಂಗ್ ಹಾಗೂ ಬೌಲರ್‌ಗಳ ಶಿಸ್ತು ಬದ್ಧ ದಾಳಿಯ ನೆರವಿನಿಂದ ರಾಜಸ್ತಾನ ರಾಯಲ್ಸ್ ತಂಡ ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಬುಧವಾರದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಎದುರು 87 ರನ್‌ಗಳ ಸುಲಭ ಗೆಲುವು ಪಡೆಯಿತು.ಸವಾಯಿ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರಾಹುಲ್ ದ್ರಾವಿಡ್ ಸಾರಥ್ಯದ ರಾಯಲ್ಸ್ 20 ಓವರ್‌ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು 179 ರನ್‌ಗಳ ಸವಾಲಿನ ಮೊತ್ತವನ್ನು ಪೇರಿಸಿಟ್ಟಿತು. ಆದರೆ, ಈ ಗುರಿ ಇಂಡಿಯನ್ಸ್ ತಂಡಕ್ಕೆ ಭಾರಿ ಸವಾಲು ಎನ್ನಿಸುವಂತೆ ಮಾಡಿದ್ದು ರಾಯಲ್ಸ್ ತಂಡದ ಅಜಿತ್ ಚಾಂಡಿಲಾ, ಜೇಮ್ಸ ಫುಲ್ಕನೆರ್ ಹಾಗೂ ಸ್ಟುವರ್ಟ್ ಬಿನ್ನಿ ಅವರ ಕರಾರುವಾಕ್ಕಾದ ಬೌಲಿಂಗ್.ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ ನೇತೃತ್ವದ ಇಂಡಿಯನ್ಸ್ 18.2 ಓವರ್‌ಗಳಲ್ಲಿ 92 ರನ್ ಗಳಿಸುವಷ್ಟರಲ್ಲಿ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು. ವಿಶ್ವ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಾದ ಸಚಿನ್ ತೆಂಡೂಲ್ಕರ್ ಹಾಗೂ ಪಾಂಟಿಂಗ್ ಎರಡಂಕಿಯ ಮೊತ್ತ ಮುಟ್ಟದೇ ಪೆವಿಲಿಯನ್ ಸೇರಿಕೊಂಡರು. ದಿನೇಶ್ ಕಾರ್ತಿಕ್ (30) ತಂಡವನ್ನು ಸೋಲಿನ ಅಪಾಯದಿಂದ ಪಾರು ಮಾಡಲು ನಡೆಸಿದ ಹೋರಾಟವೂ ವ್ಯರ್ಥವಾಯಿತು.

ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ರಾಯಲ್ಸ್‌ಗೆ ಅಜಿಂಕ್ಯ ರಹಾನೆ (ಔಟಾಗದೆ 68, 54ಎಸೆತ, 8ಬೌಂಡರಿ, 1 ಸಿಕ್ಸರ್) ಗಳಿಸಿ ಉತ್ತಮ ರನ್ ಗಳಿಸಿಕೊಟ್ಟರು.

ಪ್ರತಿಕ್ರಿಯಿಸಿ (+)