ಮಂಗಳವಾರ, ನವೆಂಬರ್ 19, 2019
29 °C

ರಾಯಲ್ಸ್‌ಗೆ ಬೌಲಿಂಗ್ ಸಮಸ್ಯೆಯಲ್ಲ: ದ್ರಾವಿಡ್

Published:
Updated:

ಜೈಪುರ (ಪಿಟಿಐ): ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ರಾಜಸ್ತಾನ ರಾಯಲ್ಸ್ ತಂಡಕ್ಕೆ ಬೌಲಿಂಗ್ ಸಮಸ್ಯೆ ಆಗುವುದಿಲ್ಲ ಎಂದು ನಾಯಕ ರಾಹುಲ್ ದ್ರಾವಿಡ್ ವಿಶ್ವಾಸ ವ್ಯಕ್ತಪಡಿಸಿದರು.ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಅನುಭವಿ ಬೌಲರ್‌ಗಳು ತಂಡಕ್ಕೆ ವಾಪಸಾಗಿದ್ದಾರೆ. ಮತ್ತೆ ಕೆಲವು ಉತ್ತಮ ಬೌಲರ್‌ಗಳ  ಜೊತೆಗೆ ಹೊಸದಾಗಿ ಒಪ್ಪಂದ ಮಾಡಿಕೊಳ್ಳಲಾಗಿದೆ. ಐಪಿಎಲ್‌ನ ಐದನೇ ಆವೃತ್ತಿಯಲ್ಲಿ ಶಾನ್ ಟೈಟ್, ಕೆವಿನ್ ಕೂಪರ್ ಮತ್ತು ಶ್ರೀಶಾಂತ್ ಗಾಯದ ಸಮಸ್ಯೆಗೆ ತುತ್ತಾಗಿದ್ದರು ಅಲ್ಲದೇ, ಶೇನ್ ವಾಟ್ಸನ್ ಬಹುತೇಕ ಪಂದ್ಯಗಳಿಗೆ ಅಲಭ್ಯರಾಗಿದ್ದರು. ಹಾಗಾಗಿ ಬೌಲಿಂಗ್ ಜವಾಬ್ದಾರಿಯನ್ನು    ಹೊಸಬರಿಗೆ ನೀಡಲಾಗಿತ್ತು' ಎಂದು  ದ್ರಾವಿಡ್     ಹೇಳಿದರು.

ಪ್ರತಿಕ್ರಿಯಿಸಿ (+)