ರಾಯಲ್ಸ್ ಜಯಭೇರಿ

7

ರಾಯಲ್ಸ್ ಜಯಭೇರಿ

Published:
Updated:

ಬೆಂಗಳೂರು: ರಾಯಲ್ಸ್ ತಂಡ ಬಿಡಿಎಫ್‌ಎ ಆಶ್ರಯದ ರಾಜ್ಯ `ಬಿ~ ಡಿವಿಷನ್ ಫುಟ್‌ಬಾಲ್ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಏಕೈಕ ಗೋಲಿನಿಂದ ನ್ಯಾಷನಲ್ಸ್ ತಂಡವನ್ನು ಮಣಿಸಿತು.



ಅಶೋಕನಗರ ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಶಿನ್ ಅವರು 48ನೇ ನಿಮಿಷದಲ್ಲಿ ರಾಯಲ್ಸ್ ತಂಡಕ್ಕೆ ಗೆಲುವಿನ ಗೋಲು ತಂದಿತ್ತರು.



ದಿನದ ಮತ್ತೊಂದು ಪಂದ್ಯದಲ್ಲಿ ಶ್ರೀ ಗಜಾನನ 5-0 ಗೋಲುಗಳಿಂದ ಗೋವನ್ಸ್ ವಿರುದ್ಧ ಸುಲಭ ಜಯ ಪಡೆಯಿತು. ಜೇಸುವ (19ನೇ ನಿಮಿಷ), ಸಲೀಮ್ (36 ಮತ್ತು 49), ಮಾದೇಶ್ (40) ಮತ್ತು ಶರತ್ (47) ವಿಜೇತ ತಂಡದ ಪರ ಚೆಂಡನ್ನು ಗುರಿ ಸೇರಿಸಿದರು.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry