ರಾಯಲ್ ಚಾಲೆಂಜರ್ಸ್‌ಗೆ ಆಘಾತ : ಭರತ್ ಅಬ್ಬರ; ಸ್ಟೇನ್ ಮೊನಚು

7

ರಾಯಲ್ ಚಾಲೆಂಜರ್ಸ್‌ಗೆ ಆಘಾತ : ಭರತ್ ಅಬ್ಬರ; ಸ್ಟೇನ್ ಮೊನಚು

Published:
Updated:
ರಾಯಲ್ ಚಾಲೆಂಜರ್ಸ್‌ಗೆ ಆಘಾತ : ಭರತ್ ಅಬ್ಬರ; ಸ್ಟೇನ್ ಮೊನಚು

ಹೈದರಾಬಾದ್ (ಪಿಟಿಐ): ಭರತ್ ಚಿಪ್ಲಿ ಅವರ ಅಬ್ಬರದ ಬ್ಯಾಟಿಂಗ್ ಹಾಗೂ ಡೆಲ್ ಸ್ಟೇನ್ ಮೊನಚಿನ ದಾಳಿಯ ನೆರವಿನಿಂದ ಡೆಕ್ಕನ್ ಚಾರ್ಜರ್ಸ್ ಹೈದರಾಬಾದ್ ತಂಡದವರು ಇಲ್ಲಿ ಗುರುವಾರ ನಡೆದ ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ತಂಡದ ವಿರುದ್ಧ 33 ರನ್‌ಗಳ ಅಂತರದಿಂದ ವಿಜಯ ಸಾಧಿಸಿದರು.ಉಪ್ಪಳದ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಗುರುವಾರ ಮೊದಲು ಬ್ಯಾಟ್ ಮಾಡಿದ ಹೈದರಾಬಾದ್ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಬೆಂಗಳೂರು ತಂಡದವರು ಆರಂಭದಲ್ಲೇ ಆಘಾತ ಅನುಭವಿಸಿದರು. ವಿರಾಟ್ ಕೊಹ್ಲಿ (71; 51 ಎ., 5 ಬೌಂಡರಿ, 3 ಸಿಕ್ಸರ್) ಆಸರೆಯಾದರೂ ತನ್ನ ಪಾಲಿನ ಓವರುಗಳು ಮುಗಿದಾಗ ಬೆಂಗಳೂರು ತಂಡದವರು ಗಳಿಸಿದ್ದು 9 ವಿಕೆಟ್‌ಗಳ ನಷ್ಟಕ್ಕೆ 142 ರನ್ ಮಾತ್ರ.ತಿಲಕರತ್ನೆ ದಿಲ್ಶಾನ್ ಬೇಗನೇ ವಿಕೆಟ್ ಒಪ್ಪಿಸಿದರು. ಆ ವಿಕೆಟ್ ಪಡೆದಿದ್ದು ವೇಗಿ ಇಶಾಂತ್ ಶರ್ಮ. ಬಳಿಕ ಡೇಲ್ ಸ್ಟೇನ್ ಬಡ್ತಿ ಪಡೆದು ಬಂದ ಜಹೀರ್ ಖಾನ್ ಅವರನ್ನು ಶೂನ್ಯಕ್ಕೆ ಔಟ್ ಮಾಡಿದರು. ಮಯಾಂಕ್ ಅಗರ್‌ವಾಲ್ (16) ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ. ಎಬಿ ಡಿವಿಲಿಯರ್ಸ್ ಶೂನ್ಯಕ್ಕೆ ಔಟ್ ಆದರು. ಮಯಾಂಕ್ ಹಾಗೂ ಡಿವಿಲಿಯರ್ಸ್ ವಿಕೆಟ್ ಪಡೆದಿದ್ದು ಮನ್‌ಪ್ರೀತ್ ಸಿಂಗ್ ಗೋಣಿ. ಸ್ಟೇನ್ ಮೊನಚಿನ ಬೌಲಿಂಗ್ ಅಂತೂ ಚಾಲೆಂಜರ್ಸ್‌ಗೆ ಅಪಾಯಕಾರಿ ಆಯಿತು.ಇದಕ್ಕೂ ಮೊದಲು ಹೈದರಾಬಾದ್ ಸವಾಲಿನ ಮೊತ್ತ ಕಲೆ ಹಾಕಲು ಕಾರಣ ಚಿಪ್ಲಿ. ಅವರು ಕೇವಲ 35 ಎಸೆತಗಳಲ್ಲಿ ಅಜೇಯ 61 ರನ್ ಗಳಿಸಿದರು. ಅದರಲ್ಲಿ ಐದು ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳಿದ್ದವು. ಬೆಂಗಳೂರಿನವರಾದ ಚಿಪ್ಲಿ ತಮ್ಮ ಊರಿನ ತಂಡವನ್ನು ಕಾಡಿದರು!ಡೆಕ್ಕನ್ ಚಾರ್ಜರ್ಸ್ ಮೂರನೇ ಓವರ್‌ನಲ್ಲಿ ಆಘಾತ ಅನುಭವಿಸಿತು. ಕಾರಣ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಅವರನ್ನು ವೇಗಿ ಜಹೀರ್ ಖಾನ್ ಬೇಗನೇ ಪೆವಿಲಿಯನ್‌ಗೆ ಕಳುಹಿಸಿದರು. ಆದರೆ ಎರಡನೇ ವಿಕೆಟ್ ಜೊತೆಯಾಟದಲ್ಲಿ ಸನ್ನಿ ಸೋಹಾಲ್ ಹಾಗೂ ನಾಯಕ ಕುಮಾರ ಸಂಗಕ್ಕಾರ 50 ರನ್ ಸೇರಿಸಿದರು. ಅದಕ್ಕೆ ಅವರು ತೆಗೆದುಕೊಂಡ ಎಸೆತ ಕೇವಲ 37.25 ಎಸೆತಗಳನ್ನು ಎದುರಿಸಿದ ಸಂಗಕ್ಕಾರ ಒಂದು ಸಿಕ್ಸರ್ ಹಾಗೂ ಮೂರು ಬೌಂಡರಿ ಸಿಡಿಸಿದರು. ಅಷ್ಟು ಮಾತ್ರವಲ್ಲದೇ, ಮೂರನೇ ವಿಕೆಟ್‌ಗೆ ಚಿಪ್ಲಿ ಜೊತೆಗೂಡಿ 34 ಎಸೆತಗಳಲ್ಲಿ 43 ರನ್ ಸೇರಿಸಿದರು. ಬಳಿಕ ಬಂದ ಬರ್ಥ್‌ಡೇ ಬಾಯ್ ಜೀನ್ ಪಾಲ್ ಡುಮಿನಿ 15 ಎಸೆತಗಳಲ್ಲಿ 22 ರನ್ ಗಳಿಸಿದರು.ರಾಯಲ್ ಚಾಲೆಂಜರ್ಸ್ ತಂಡದ ವೇಗಿ ಜಹೀರ್ ಮೂರು ವಿಕೆಟ್ ಪಡೆದು ಗಮನ ಸೆಳೆದರು. ಆದರೆ ಉಳಿದ ಬೌಲರ್‌ಗಳು ದುಬಾರಿಯಾದರು.

ಸ್ಕೋರು ವಿವರ

ಡೆಕ್ಕನ್ ಚಾರ್ಜರ್ಸ್: 20 ಓವರ್‌ಗಳಲ್ಲಿ 5  ವಿಕೆಟ್ ನಷ್ಟಕ್ಕೆ 175


ಸನ್ನಿ ಸೋಹಾಲ್ ಸಿ ಸೌರಭ್ ತಿವಾರಿ ಬಿ ರ್ಯಾನ್ ನಿನಾನ್  38

ಶಿಖರ್ ಧವನ್ ಸಿ ಡೇನಿಯಲ್ ವೆಟೋರಿ ಬಿ ಜಹೀರ್ ಖಾನ್  11

ಕುಮಾರ ಸಂಗಕ್ಕಾರ ಸಿ ಡಿವಿಲಿಯರ್ಸ್ ಬಿ ವಾನ್ ಡರ್ ವಾಥ್  36

ಭರತ್ ಚಿಪ್ಲಿ ಔಟಾಗದೆ  61

ಜೀನ್ ಪಾಲ್ ಡುಮಿನಿ ಸಿ ವಿರಾಟ್ ಕೊಹ್ಲಿ ಬಿ ಜಹೀರ್ ಖಾನ್ 22

ಡೇನಿಯಲ್ ಕ್ರಿಸ್ಟಿಯನ್ ಎಲ್‌ಬಿಡಬ್ಲ್ಯು ಬಿ ಜಹೀರ್ ಖಾನ್  00

ಇತರೆ: (ಲೆಗ್‌ಬೈ-2, ವೈಡ್-3, ನೋಬಾಲ್-2)   07

ವಿಕೆಟ್ ಪತನ: 1-20 (ಧವನ್; 2.5); 2-70 (ಸೋಹಾಲ್; 8.6); 3-113 (ಸಂಗಕ್ಕಾರ; 14.4); 4-168 (ಡುಮಿನಿ; 19.2); 5-175 (ಕ್ರಿಸ್ಟಿಯನ್; 19.6)

ಬೌಲಿಂಗ್: ಜಹೀರ್ ಖಾನ್ 4-0-32-3 (ವೈಡ್-1), ವಾನ್ ಡರ್ ವಾಥ್ 4-0-30-1 (ನೋಬಾಲ್-2, ವೈಡ್-1), ಎಸ್.ಅರವಿಂದ್ 3-0-26-0 (ವೈಡ್-1), ಡೇನಿಯಲ್ ವೆಟೋರಿ 4-0-29-0, ರ್ಯಾನ್ ನಿನಾನ್ 3-0-34-1, ತಿಲಕರತ್ನೆ ದಿಲ್ಶಾನ್ 2-0-22-0ರಾಯಲ್ ಚಾಲೆಂಜರ್ಸ್: 20 ಓವರುಗಳಲ್ಲಿ

9 ವಿಕೆಟ್‌ಗಳ ನಷ್ಟಕ್ಕೆ 142


ಮಯಾಂಕ್ ಅಗರ್ವಾಲ್ ಸಿ ಮಿಶ್ರಾ ಬಿ ಮನ್‌ಪ್ರೀತ್ ಗೋಣಿ  16

ತಿಲಕರತ್ನೆ ದಿಲ್ಶಾನ್ ಸಿ ಕುಮಾರ ಸಂಗಕ್ಕಾರ ಬಿ ಇಶಾಂತ್ ಶರ್ಮ 07

ಜಹೀರ್ ಖಾನ್ ಬಿ ಡೆಲ್ ಸ್ಟೇನ್  00

ವಿರಾಟ್ ಕೊಹ್ಲಿ ಬಿ ಮನ್‌ಪ್ರೀತ್ ಗೋಣಿ  71

ಅಬ್ರಹಾಮ್ ಡಿ ವೀಲಿಯರ್ಸ್ ಸಿ ಸಂಗಕ್ಕಾರ ಬಿ ಗೋಣಿ  00

ಸೌರಭ್ ತಿವಾರಿ ಸಿ ಕುಮಾರ ಸಂಗಕ್ಕಾರ ಬಿ ಅಮಿತ್ ಮಿಶ್ರಾ  07

ಚೆತೇಶ್ವರ ಪೂಜಾರ ಸಿ ಡೇನಿಯಲ್ ಕ್ರಿಸ್ಟಿಯನ್ ಬಿ ಡೆಲ್ ಸ್ಟೇನ್  25

ಜಾನ್ ವಾನ್ ಡೇರ್ ವಥ್ ಸಿ ಸಂಗಕ್ಕಾರ ಬಿ ಡೆಲ್ ಸ್ಟೇನ್  00

ಡೇನಿಯಲ್ ವೆಟೋರಿ ಔಟಾಗದೆ  03

ರಿಯಾನ್ ನಿನನ್ ಸಿ ಸಂಗಕ್ಕಾರ ಬಿ ಡೇನಿಯಲ್ ಕ್ರಿಸ್ಟಿಯನ್  03

ಶ್ರೀನಾಥ್ ಅರವಿಂದ್ ಔಟಾಗದೆ  02

ಇತರೆ: (ಲೆಗ್‌ಬೈ-3, ವೈಡ್-2, ನೋಬಾಲ್-3)  08

ವಿಕೆಟ್ ಪತನ: 1-8 (ತಿಲಕರತ್ನೆ ದಿಲ್ಶಾನ್; 1.6), 2-16 (ಜಹೀರ್ ಖಾನ್; 2.6), 3-27 (ಮಯಾಂಕ್ ಅಗರ್ವಾಲ್; 4.6), 4-29 (ಅಬ್ರಹಾಮ್ ಡಿ ವೀಲಿಯರ್ಸ್; 6.4), 5-56 (ಸೌರಭ್ ತಿವಾರಿ; 11.1), 6-118 (ಚೆತೇಶ್ವರ ಪೂಜಾರ; 16.5), 7-118 (ವಾನ್ ಡೇರ್ ವಥ್; 16.6), 8-130 (ವಿರಾಟ್ ಕೊಹ್ಲಿ; 17.4), 9-137 (ರಿಯಾನ್ ನಿನನ್; 19.1).

ಬೌಲಿಂಗ್: ಡೆಲ್ ಸ್ಟೇನ್ 4-0-24-3 (ನೋಬಾಲ್-2), ಇಶಾಂತ್ ಶರ್ಮ 4-0-21-1, ಮನ್‌ಪ್ರೀತ್ ಗೋಣಿ 4-0-31-3, ಡೇನಿಯಲ್ ಕ್ರಿಸ್ಟಿಯನ್ 4-0-22-1 (ವೈಡ್-2), ಅಮಿತ್ ಮಿಶ್ರಾ 4-0-41-1 (ನೋಬಾಲ್-1)

ಫಲಿತಾಂಶ: ಡೆಕ್ಕನ್ ಚಾರ್ಜರ್ಸ್‌ಗೆ 33 ರನ್‌ಗಳ ಗೆಲುವು. ಪಂದ್ಯ ಶ್ರೇಷ್ಠ: ಡೆಲ್ ಸ್ಟೇನ್ (ಡೆಕ್ಕನ್ ಚಾರ್ಜರ್ಸ್).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry