ಶುಕ್ರವಾರ, ಜೂನ್ 18, 2021
28 °C

ರಾಯಾಪುರ ನಿರಾಶ್ರಿತರ ಕೇಂದ್ರ ಅಭಿವೃದ್ಧಿ:ರೂ 60 ಲಕ್ಷ ಮಂಜೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: “ರಾಯಾಪುರ ನಿರಾಶ್ರಿತರ ಕೇಂದ್ರದ ಅಭಿವೃದ್ಧಿ ಕಾರ್ಯಕ್ರಮಗಳಿಗಾಗಿ ಸರ್ಕಾರ 60 ಲಕ್ಷ ರೂಪಾಯಿಗಳ ವಿಶೇಷ ಅನುದಾನ ಮಂಜೂರು ಮಾಡಿದೆ” ಎಂದು ಜಿಲ್ಲಾಧಿಕಾರಿ ದರ್ಪಣ ಜೈನ್ ತಿಳಿಸಿದರು.

ಇಲ್ಲಿನ ರಾಯಾಪುರದ ನಿರಾಶ್ರಿತರ ಕೇಂದ್ರದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಹುಬ್ಬಳ್ಳಿಯ ಇನ್ನರ್‌ವ್ಹೀಲ್ ಕ್ಲಬ್ ನೀಡಿದ ಬಟ್ಟೆ ಹಾಗೂ ಪಾದರಕ್ಷೆಗಳ ವಿತರಿಸಿ ಅವರು ಮಾತನಾಡಿದರು.ಈ ಅನುದಾನವನ್ನು ಬಯಲು ರಂಗಮಂದಿರ, ತರಬೇತಿ ಘಟಕ ಹಾಗೂ ಮಹಿಳೆಯರಿಗಾಗಿ ಪ್ರತ್ಯೇಕ ವಸತಿ ನಿಲಯಗಳ ನಿರ್ಮಾಣಕ್ಕಾಗಿ ಬಳಸಿಕೊಳ್ಳಲಾಗುವುದು. ಸರ್ಕಾರದಿಂದ 22 ಲಕ್ಷ ರೂ. ಪ್ರತ್ಯೇಕ ಅನುದಾನ ಬಿಡುಗಡೆಯಾಗಿದ್ದು, ಕೇಂದ್ರ ಆವರಣದಲ್ಲಿ ರಸ್ತೆ ನಿರ್ಮಾಣ, ಸೋಲಾರ ದೀಪದ ಅಳವಡಿಕೆ, ಕಂಪೌಂಡ ನಿರ್ಮಾಣ ಹಾಗೂ ಮತ್ತಿತರ ಚಟುವಟಿಕೆಗಳಿಗಾಗಿ ಉಪಯೋಗಿಸಲಾಗುವುದು ಎಂದರು.ಕೇಂದ್ರದ ನಿರಾಶ್ರಿತರಿಗಾಗಿ ಆರೋಗ್ಯ ತಪಾಸಣೆ ಶಿಬಿರ, ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದವರಿಂದ ಪ್ರವಚನ, ಸಾಕ್ಷರತಾ ಕಾರ್ಯಕ್ರಮ ಹಾಗೂ ಯೋಗ ಶಿಬಿರಗಳನ್ನು ಸಹ ಏರ್ಪಡಿಸಲಾಗಿದೆ.ನೂತನವಾಗಿ ಆರಂಭಿಸಲಾಗುವ ವಿವಿಧ ವೃತ್ತಿಗಳ ತರಬೇತಿ ಕೇಂದ್ರದಲ್ಲಿ ಇಲ್ಲಿಗೆ ಬರುವಂತಹ ನಿರಾಶ್ರಿತರಿಗೆ ಸ್ವಾವಲಂಬಿಗಳನ್ನಾಗಿ ಮಾಡಲು ಪೊರಕೆ, ಪೆನ್ಸಿಲ್, ಫಿನಾಯಿಲ್, ಬುಕೆ ಮತ್ತು ಫೈಲ್‌ಬೋರ್ಡ್ ತಯಾರಿಕೆಯ ತರಬೇತಿಯನ್ನು ನೀಡಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಪ್ರಯತ್ನಿಸಲಾಗುತ್ತಿದೆ ಎಂದರು.ಶಾಸಕ ಚಂದ್ರಕಾಂತ ಬೆಲ್ಲದ ಮಾತನಾಡಿ, ಈ ಕೇಂದ್ರದಿಂದ ಹೋದ ಮೇಲೆ ತಮ್ಮ ಕುಟುಂಬದ ಸದಸ್ಯರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಸಂತೋಷದಿಂದ ಇರಬೇಕು. ಜಿಲ್ಲಾಧಿಕಾರಿಗಳು ಈ ಕೇಂದ್ರದ ಅಭಿವೃದ್ಧಿಗೆ ಹೆಚ್ಚಿನ ಕಾಳಜಿ ವಹಿಸಿದ್ದು ಸಂತಸಹ ಸಂಗತಿ ಎಂದರು.ಇನ್ನರ್‌ವ್ಹೀಲ್ ಅಧ್ಯಕ್ಷೆ ರುಕ್ಸಾನ್ ಕಿತ್ತೂರ ಮಾತನಾಡಿದರು. ಮಂಜು ಓಸವಾಲ್, ನವೀತಾ ಮೋದಿ, ಸಂಗೀತಾ ರಾಠೋಡ್ ಉಪಸ್ಥಿತರಿದ್ದರು.ಕೇಂದ್ರದ ಅಧೀಕ್ಷಕ ಕೆ.ಎಸ್. ದಿವಾಕರ್ ಸ್ವಾಗತಿಸಿ, ನಿರೂಪಿಸಿದರು. ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಎಸ್.ಎ.ಮುಲ್ಲಾ ವಂದಿಸಿದರು.ಇದಕ್ಕೂ ಮುಂಚೆ ಶಾಸಕ ಚಂದ್ರಕಾಂತ ಬೆಲ್ಲದ ಅವರು ನಿರಾಶ್ರಿತ ಕೇಂದ್ರದ ವಿವಿಧ ವಿಭಾಗಗಳಿಗೆ ಭೇಟಿ ನೀಡಿ ಅಲ್ಲಿಯ ಚಟುವಟಿಕೆಗಳನ್ನು ಪರಿಶೀಲಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.