ಗುರುವಾರ , ಜೂನ್ 24, 2021
23 °C

ರಾಯ್‌ಬರೇಲಿ: ಮಣ್ಣುಪಾಲಾದ ಪ್ರತಿಷ್ಠೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಮೇಥಿ/ ರಾಯ್ ಬರೇಲಿ (ಪಿಟಿಐ): ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಆಘಾತ ಉಂಟುಮಾಡಿರುವುದು ಅಮೇಥಿ ಹಾಗೂ ರಾಯ್‌ಬರೇಲಿ ಕ್ಷೇತ್ರಗಳ ಫಲಿತಾಂಶ.ಇಂದಿರಾ ಗಾಂಧಿ ಅವರ ಕಾಲದಿಂದಲೂ ಕಾಂಗ್ರೆಸ್ ತೆಕ್ಕೆಯಲ್ಲಿದ್ದ ಈ ಅವಳಿ ಲೋಕಸಭಾ ಕ್ಷೇತ್ರಗಳು ಪಕ್ಷದ ಪ್ರತಿಷ್ಠೆಯ ಪ್ರಶ್ನೆಯಾಗಿದ್ದವು. ಆದರೆ ಇಲ್ಲಿನ ಒಟ್ಟು 10 ವಿಧಾನಸಭಾ ಕ್ಷೇತ್ರಗಳ ಪೈಕಿ ಪಕ್ಷವು ಕೇವಲ ಎರಡರಲ್ಲಿ ಗೆದ್ದಿದೆ. ಸೋನಿಯಾ ಗಾಂಧಿ ಅವರ ರಾಯ್‌ಬರೇಲಿ ಕ್ಷೇತ್ರದಲ್ಲಿ ಕಾಂಗ್ರೆಸ್ `ಶೂನ್ಯ~ ಸಂಪಾದನೆ ಮಾಡಿದೆ.

 

ಐದು ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಸಮಾಜವಾದಿ ಪಕ್ಷ ಹಾಗೂ ಒಂದರಲ್ಲಿ ಪೀಸ್ ಪಾರ್ಟಿ ಜಯ ಗಳಿಸಿವೆ. ಕಾಂಗ್ರೆಸ್ ಸಂಸದ ಸಂಜಯ್ ಸಿಂಗ್ ಅವರ ಪತ್ನಿ, ಅಮೇಥಿಯ ಹಾಲಿ ಶಾಸಕಿ ಅಮಿತಾ ಸಿಂಗ್ ಅವರು ಸೋತಿರುವುದು ಪಕ್ಷಕ್ಕೆ ಭಾರಿ ಹಿನ್ನಡೆಯಾಗಿದೆ. ಇಲ್ಲಿ ಸಮಾಜವಾದಿ ಪಕ್ಷದ ಗಾಯತ್ರಿ ಪ್ರಸಾದ್ ಆಯ್ಕೆಯಾಗಿದ್ದಾರೆ.ರಾಯ್ ಬರೇಲಿಗೆ ಹೋಲಿಸಿದರೆ ರಾಹುಲ್ ಪ್ರತಿನಿಧಿಸುವ ಅಮೇಥಿ ಕ್ಷೇತ್ರವೇ ಮೇಲು. ಇಲ್ಲಿನ ಐದು ಕ್ಷೇತ್ರಗಳಲ್ಲಿ ಎರಡು ಕಾಂಗ್ರೆಸ್ ಪಾಲಾಗಿವೆ. ಈ ಎರಡೂ ಲೋಕಸಭಾ ಕ್ಷೇತ್ರಗಳಲ್ಲಿ ಪಕ್ಷವು 2007ರ ವಿಧಾನಸಭಾ ಚುನಾವಣೆಯಲ್ಲಿ ಏಳು ಕ್ಷೇತ್ರಗಳನ್ನು ಗೆದ್ದಿತ್ತು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.