ರಾಷ್ಟ್ರಗೀತೆ ಅರ್ಧದಲ್ಲಿ ಮೊಟಕು; ಕ್ಷಮೆಯಾಚಿಸಿದ ಐಸಿಸಿ

7

ರಾಷ್ಟ್ರಗೀತೆ ಅರ್ಧದಲ್ಲಿ ಮೊಟಕು; ಕ್ಷಮೆಯಾಚಿಸಿದ ಐಸಿಸಿ

Published:
Updated:

ನವದೆಹಲಿ (ಪಿಟಿಐ): ವೆಸ್ಟ್‌ಇಂಡೀಸ್ ವಿರುದ್ಧದ ಪಂದ್ಯ ಆರಂಭವಾಗುವ ಮುನ್ನ ಹಾಡಲಾದ ದಕ್ಷಿಣ ಆಫ್ರಿಕಾದ ರಾಷ್ಟ್ರಗೀತೆಯನ್ನು ಅರ್ಧದಲ್ಲಿಯೇ ಮೊಟಕುಗೊಳಿಸಿದ ಘಟನೆ ಇಲ್ಲಿನ ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ಗುರುವಾರ ನಡೆಯಿತು.ಪಂದ್ಯದ ಆರಂಭದಲ್ಲಿ ಹಾಡುವಾಗ ಮುದ್ರಿಸಿದ್ದ ದಕ್ಷಿಣ ಆಫ್ರಿಕಾದ ರಾಷ್ಟ್ರಗೀತೆಯನ್ನು ಅರ್ಧದಲ್ಲಿಯೇ ಮೊಟಕುಗೊಳಿಸಲಾಯಿತು. ಮುದ್ರಸಿದ್ದ ಧ್ವನಿ ನಿಂತು ಹೋದರೂ, ನಾಯಕ ಗ್ರೇಮ್‌ಸ್ಮಿತ್ ಹಾಡನ್ನು ಪೂರ್ಣಗೊಳಿಸಿದರು. ಇದರಿಂದ ಮುಜುಗುರಕ್ಕೆ ಒಳಗಾದ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಆ ದೇಶದ ಕ್ಷವೆು ಯಾಚಿಸಿದೆ.ಆದರೆ ಈ ಘಟನೆ ನಡೆದ ಕೆಲ ಗಂಟೆಗಳಲ್ಲಿ ಟ್ವಿಟ್ಟರ್ ಸೇರಿದಂತೆ ಇತರೆ ಸಾಮಾಜಿಕ ತಾಣಗಳಲ್ಲಿ ದಕ್ಷಿಣ ಆಫ್ರಿಕಾದ ಪ್ರಜೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ,

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry