ರಾಷ್ಟ್ರಗೀತೆ: ವಿಶ್ವದಾಖಲೆ

7

ರಾಷ್ಟ್ರಗೀತೆ: ವಿಶ್ವದಾಖಲೆ

Published:
Updated:

ಕಾನ್ಪುರ (ಪಿಟಿಐ): ಲಕ್ಷಕ್ಕಿಂತ ಹೆಚ್ಚು ಜನರು ಇಲ್ಲಿನ ಗ್ರೀನ್ ಪಾರ್ಕ್ ಕ್ರೀಡಾಂಗಣದಲ್ಲಿ ಭಾನುವಾರ `ಜನ ಗಣ ಮನ' ರಾಷ್ಟ್ರಗೀತೆಯನ್ನು ಸಾಮೂಹಿಕವಾಗಿ ಹಾಡುವ ಮೂಲಕ ಗಿನ್ನಿಸ್ ವಿಶ್ವದಾಖಲೆ ನಿರ್ಮಿಸಿದರು. ಈ ಮೂಲಕ ಈ ಹಿಂದೆ 42 ಸಾವಿರ ಜನರು ಸೇರಿ ರಾಷ್ಟ್ರಗೀತೆ ಹಾಡಿದ ಪಾಕಿಸ್ತಾನದ ದಾಖಲೆಯನ್ನು ಮುರಿದಂತಾಗಿದೆ. ಒಟ್ಟಾರೆ 1,25,000 ಜನರು ವಿಶ್ವದಾಖಲೆಯನ್ನು ಬರೆಯಲು ದನಿಗೂಡಿಸಿದರು.ರಾಜನ್, ಸಾಜನ್‌ಗೆ  ತಾನ್‌ಸೇನ್ ಸಮ್ಮಾನ್

ಗ್ವಾಲಿಯರ್ (ಪಿಟಿಐ): 
ಪ್ರಸಿದ್ಧ ಗಾಯಕರಾದ ರಾಜನ್ ಹಾಗೂ ಸಾಜನ್ ಮಿಶ್ರ ಸಹೋದರರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ 2011-12ನೇ ಸಾಲಿನ ಪ್ರತಿಷ್ಠಿತ `ರಾಷ್ಟ್ರೀಯ ತಾನ್‌ಸೇನ್ ಸಮ್ಮಾನ್' ಪ್ರಶಸ್ತಿಗೆ  ಭಾಜನರಾಗಿದ್ದಾರೆ. ಪ್ರಶಸ್ತಿಯು 2 ಲಕ್ಷ ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿದ್ದು, ಇಲ್ಲಿನ ಬನಾರಸ್ ಘರಾಣ ಶಾಸ್ತ್ರೀಯ ಸಂಗೀತ ಶಾಲೆಯಲ್ಲಿ ಡಿಸೆಂಬರ್ 14ರಂದು ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry