ರಾಷ್ಟ್ರದಲ್ಲಿ 5700 ಅಂಚೆಯಣ್ಣರ ಕೊರತೆ

7

ರಾಷ್ಟ್ರದಲ್ಲಿ 5700 ಅಂಚೆಯಣ್ಣರ ಕೊರತೆ

Published:
Updated:

ನವದೆಹಲಿ (ಪಿಟಿಐ): ರಾಷ್ಟ್ರದಾದ್ಯಂತ 5700 ಪೋಸ್ಟ್‌ಮನ್‌ಗಳ ಕೊರತೆ ಇರುವ ಕಾರಣ ಅನೇಕ ಪ್ರಕರಣಗಳಲ್ಲಿ ತ್ವರಿತ ಅಂಚೆ ಸೇವೆ ವಿಳಂಬ ಆಗಿದೆ ಎಂದು ದೂರಸಂಪರ್ಕ ಖಾತೆ ಸಚಿವ ಕಪಿಲ್ ಸಿಬಲ್ ಹೇಳಿದರು.ತ್ವರಿತ ಅಂಚೆ ಸೇವೆಯನ್ನು  (ಸ್ಪೀಡ್ ಪೋಸ್ಟ್) ಎಲೆಕ್ಟ್ರಾನಿಕ್ ವ್ಯವಸ್ಥೆಯ ಮೂಲಕ ಇನ್ನಷ್ಟು ಉತ್ತಮಗೊಳಿಸಲಾಗುವುದು ಮತ್ತು ಅಗತ್ಯ ಸಿಬ್ಬಂದಿಯನ್ನು ಶೀಘ್ರ ನೇಮಕ ಮಾಡಲಾಗುವುದು ಎಂದೂ  ಕಪಿಲ್ ಸಿಬಲ್ ಅವರು ರಾಜ್ಯಸಭೆಗೆ ತಿಳಿಸಿದರು.

ಅಲ್ಪಾವಧಿ ನೋಟಿಸ್‌ಗೆ ಉತ್ತರಿಸಿದ ಸಚಿವರು, 12ನೇ ಪಂಚವಾರ್ಷಿಕ ಯೋಜನೆಯಲ್ಲಿ ಒಟ್ಟಾರೆ ತ್ವರಿತ ಅಂಚೆ ಸೇವೆಯನ್ನು ಆಧುನೀಕರಣಗೊಳಿಸಲಾಗುವುದು ಎಂದು ಹೇಳಿದರು.ಗ್ರಾಹಕರಿಗೆ ತ್ವರಿತವಾಗಿ ಪತ್ರಗಳನ್ನು ಮತ್ತು ಪಾರ್ಸೆಲ್‌ಗಳನ್ನು ಬಟವಾಡೆ ಮಾಡಲು ಶೀಘ್ರದಲ್ಲಿ ಅಂಚೆ ಸಿಬ್ಬಂದಿಯನ್ನು ನೇಮಕ ಮಾಡಲಾಗುವುದು ಎಂದು ಸಚಿವರು ಈ ಸಂದರ್ಭದಲ್ಲಿ ಭರವಸೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry