ರಾಷ್ಟ್ರಪಕ್ಷಿ ನವಿಲು ಬೇಟೆ, 3 ಆರೋಪಿ ಸೆರೆ

7

ರಾಷ್ಟ್ರಪಕ್ಷಿ ನವಿಲು ಬೇಟೆ, 3 ಆರೋಪಿ ಸೆರೆ

Published:
Updated:
ರಾಷ್ಟ್ರಪಕ್ಷಿ ನವಿಲು ಬೇಟೆ, 3 ಆರೋಪಿ ಸೆರೆ

ಚಿಂಚೋಳಿ: ಬಾಯಿ ಚಪ್ಪರಿಸುತ್ತ, ನಾಲಿಗೆಯ ಚಪಲ ತೀರಿಕೊಳ್ಳಲು ಹೋದ ಮೂವರು ಕಾರಾಗೃಹದ ಕಬ್ಬಿಣದ ಸರಳುಗಳ ಹಿಂದೆ ಬಂಧಿಯಾದ ಕತೆಯಿದು.ಇಲ್ಲಿನ ಕೊಂಚಾವರಂ ವನ್ಯಜೀವಿ ಧಾಮದಲ್ಲಿ ಬರುವ ಸೋಮಲಿಂಗದಳ್ಳಿಯ ಕಾಯ್ದಿಟ್ಟ ಅರಣ್ಯದಲ್ಲಿ ರಾಷ್ಟ್ರಪಕ್ಷಿ ನವಿಲು ಬೇಟೆಯಾಡಿ, ದೇಶಿಯ ಬಂದೂಕಿನಿಂದ(ಮಿಸೈಲ್ ಗನ್) ಗೋಲಿ ಹಾರಿಸಿ ನವಿಲು ಕೊಂದ ಖದೀಮರ ತಂಡ, ರೆಕ್ಕೆಪುಕ್ಕಗಳನ್ನು ಕಿತ್ತು ಹಾಕಿ ಅಲ್ಲಿಯೇ ಸುಡುತ್ತಿರುವಾಗ ಪ್ರಾದೇಶಿಕ ಅರಣ್ಯ ಇಲಾಖೆಯ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ಸಿಕ್ಕಿಬಿದ್ದಿದ್ದಾರೆ.ರಾಜ್ಯದಲ್ಲಿ ವನ್ಯಜೀವಿ ಸಪ್ತಾಹ ಆಚರಿಸುತ್ತಿರುವ ಅಕ್ಟೋಬರ್ ಮೊದಲ ವಾರದಲ್ಲಿಯೇ ವನ್ಯಜೀವಿಯಾದ ರಾಷ್ಟ್ರಪಕ್ಷಿ ಬೇಟೆಯಾಡಿದ ಆರೋಪದಲ್ಲಿ ಚಿಕ್ಕಲಿಂಗದಳ್ಳಿಯ ನರಸಿಮ್ಲು ಭೀಮಣ್ಣ, ದಶರಥ ಖೂಬಾ ರಾಠೋಡ್, ಸಂತೋಷ ನಾಗಪ್ಪ ಬಂಧಿತರಾಗಿದ್ದಾರೆ.ಆರೋಪಿಗಳಿಂದ ಸತ್ತಿರುವ ಅರೆಬರೆ ಬೆಂದ ನವಿಲು, ಮಿಸೈಲ್ ಗನ್, ಗನ್ ಪೌಡರ್, ಬ್ಯಾಟರಿ(ಟಾರ್ಚ್) ಜಪ್ತಿ ಮಾಡಿ ಮೂವರು ಆರೋಪಿಗಳನ್ನು ಬುಧವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.ಪ್ರಾದೇಶಿಕ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಎಂ.ಎಲ್. ಬಾವಿಕಟ್ಟಿ ಮಾರ್ಗದರ್ಶನದಲ್ಲಿ, ಉಪ ವಲಯ ಅರಣ್ಯಾಧಿಕಾರಿ ವೀರೇಂದ್ರ ಸಿ.ವೈ, ಸಂಜೀವಕುಮಾರ ಚವ್ಹಾಣ, ಹಣಮಂತ ಬಿರಾದಾರ, ರಕ್ಷಕರಾದ ಸಿದ್ಧಾರೂಢ, ಸಿದ್ರಾಮ, ಮಹೇಂದ್ರರೆಡ್ಡಿ, ಮಹಿಬೂಬಲಿ, ತುಕ್ಕಪ್ಪ ಮತ್ತು ಸಿಬ್ಬಂದಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಾದೇಶಿಕ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರೆದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry