ರಾಷ್ಟ್ರಪತಿಯವರ ಗೌರವಾರ್ಥ ರಾಜಭವನದಲ್ಲಿ ಔತಣಕೂಟ

7

ರಾಷ್ಟ್ರಪತಿಯವರ ಗೌರವಾರ್ಥ ರಾಜಭವನದಲ್ಲಿ ಔತಣಕೂಟ

Published:
Updated:

ಬೆಂಗಳೂರು: ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರ ಭೇಟಿಯ ಗೌರವಾರ್ಥವಾಗಿ ಸೋಮವಾರ ರಾಜಭವನದಲ್ಲಿ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಔತಣಕೂಟ ಆಯೋಜಿಸಲಾಗಿತ್ತು.ರಾಜ್ಯಪಾಲ ಎಚ್‌.ಆರ್‌. ಭಾರ ದ್ವಾಜ್‌, ಅವರ ಪತ್ನಿ ಪ್ರಫುಲ್ಲತಾ ಭಾರದ್ವಾಜ್‌, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗ ವಹಿಸಿದ್ದರು. ಕೆಲವೇ ಮಂದಿ ಗಣ್ಯರಿಗೆ ಈ ಕಾರ್ಯಕ್ರಮಕ್ಕೆ ರಾಜಭವನದಿಂದ ಆಹ್ವಾನ ನೀಡಲಾಗಿತ್ತು.ರಾಜ್ಯದ ಸಾಂಸ್ಕೃತಿಕ ಹಿರಿಮೆಗೆ ಸಂಬಂಧಿಸಿದ ‘ಕರ್ನಾಟಕ: ಎ ಕಲ್ಚರಲ್‌ ಒಡೆಸ್ಸಿ’ ಎಂಬ ಇಂಗ್ಲಿಷ್‌ ಕೃತಿಯನ್ನು ಇದೇ ಸಂದರ್ಭದಲ್ಲಿ ರಾಷ್ಟ್ರಪತಿಯವರು ಬಿಡುಗಡೆ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry