ರಾಷ್ಟ್ರಪತಿ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗೆ ಎಸ್‌ಪಿ ಬೆಂಬಲ

7

ರಾಷ್ಟ್ರಪತಿ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗೆ ಎಸ್‌ಪಿ ಬೆಂಬಲ

Published:
Updated:

ನವದೆಹಲಿ (ಪಿಟಿಐ): ರಾಷ್ಟ್ರಪತಿ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ಸೂಚಿಸುವುದಾಗಿ ಸಮಾಜವಾದಿ ಪಕ್ಷ ಬುಧವಾರ ಹೇಳಿದ್ದು, ಪಿ.ಎ. ಸಂಗ್ಮಾ ಅವರ ಕುರಿತು ಇತರ ಪಕ್ಷಗಳು ಅಷ್ಟಾಗಿ ಉತ್ಸುಕತೆ ತೋರಿಲ್ಲ.



ರಾಷ್ಟ್ರಪತಿ ಅಭ್ಯರ್ಥಿ ಕುರಿತು ತಮ್ಮ ಪಕ್ಷದ ನಿಲುವನ್ನು ಬಹಿರಂಗಪಡಿಸಿದ ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್, ಆ ಅಭ್ಯರ್ಥಿ ಅಧಿಕಾರಿಯಾಗಲಿ ಅಥವಾ ರಾಜಕೀಯೇತರ ಅಭ್ಯರ್ಥಿಯಾಗಲಿ ಆಗಿರಬಾರದು ಎಂದು ಹೇಳಿದ್ದಾರೆ.



ಈ ಮಧ್ಯೆ ಸಂಗ್ಮಾ,  ಸಿಪಿಎಂ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಹಾಗೂ ಒಡಿಶಾ ಮುಖ್ಯಂತ್ರಿ ನವೀನ್ ಪಟ್ನಾಯಕ್ ಅವರನ್ನು ಭೇಟಿಯಾಗಿ ಬುಡಕಟ್ಟು ಜನಾಂಗಕ್ಕೆ ಸೇರಿದ ತಮ್ಮನ್ನು ಬೆಂಬಲಿಸುವಂತೆ ಕೋರಿದ್ದಾರೆ.



ಸಂಗ್ಮಾ  ರಾಷ್ಟ್ರಪತಿ ಅಭ್ಯರ್ಥಿಯಾಗುವುದಕ್ಕೆ ಛತ್ತೀಸ್‌ಗಡದ ಮಾಜಿ ಮುಖ್ಯಮಂತ್ರಿ ಬುಡಕಟ್ಟು ನಾಯಕ ಅಜಿತ್ ಜೋಗಿ ವಿರೋಧ ವ್ಯಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry