ರಾಷ್ಟ್ರಪತಿ ಭೇಟಿ: ಸಂಚಾರ ಬದಲಾವಣೆ

7

ರಾಷ್ಟ್ರಪತಿ ಭೇಟಿ: ಸಂಚಾರ ಬದಲಾವಣೆ

Published:
Updated:

ಬೆಂಗಳೂರು: ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು ಎರಡು ದಿನಗಳ ರಾಜ್ಯ ಭೇಟಿಗಾಗಿ ಸೋಮವಾರ (ಸೆ.23) ನಗರಕ್ಕೆ ಬರುತ್ತಿರುವುದರಿಂದ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.ರಾಷ್ಟ್ರಪತಿಗಳ ವಾಹನ ಸೋಮ ವಾರ ಸಂಜೆ ಐದು ಗಂಟೆಯಿಂದ ಆರು ಗಂಟೆವರೆಗೆ ಎಚ್ಎಎಲ್ ವಿಮಾನ ನಿಲ್ದಾಣ ರಸ್ತೆ, ಇಂದಿರಾನಗರ ನೂರು ಅಡಿ ರಸ್ತೆ, ದೊಮ್ಮಲೂರು ರಸ್ತೆ,- ಎಎಸ್‌ಸಿ ಸೆಂಟರ್,   ಟ್ರಿನಿಟಿ ಚರ್ಚ್ ರಸ್ತೆ, ಎಂ.ಜಿ.ರಸ್ತೆ, ಮಣಿಪಾಲ್ ಸೆಂಟರ್, - ಕಬ್ಬನ್ ರಸ್ತೆ, ಕೆ.ಆರ್. ರಸ್ತೆ, ಅನಿಲ್‌ಕುಂಬ್ಳೆ ವೃತ್ತ, ಕ್ವೀನ್ಸ್ ರಸ್ತೆ, - ಸಿಟಿಓ ವೃತ್ತ, - ಪೊಲೀಸ್ ತಿಮ್ಮಯ್ಯ ವೃತ್ತ ಮತ್ತ್ು ರಾಜಭವನ ರಸ್ತೆ ಮಾರ್ಗದಲ್ಲಿ ಸಂಚರಿಸುವಾಗ ಇತರೆ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.ಮಂಗಳವಾರ (ಸೆ.24) ಬೆಳಿಗ್ಗೆ 9.45ರಿಂದ 10.30ರವರೆಗೆ ರಾಜಭ ವನ ರಸ್ತೆ, ಇನ್‌ಫೆಂಟ್ರಿ ರಸ್ತೆ,- ಸಿಟಿಓ ವೃತ್ತ, - ಕ್ವೀನ್ಸ್ ರಸ್ತೆ, ಎಂ.ಜಿ.ರಸ್ತೆ, ಅನಿಲ್‌ಕುಂಬ್ಳೆ ವೃತ್ತ, ಬಿಆರ್‌ವಿ ಜಂಕ್ಷನ್, ಕೆ.ಆರ್.ರಸ್ತೆ, ಕಬ್ಬನ್ ರಸ್ತೆ ಜಂಕ್ಷನ್,- ಮಣಿಪಾಲ್ ಸೆಂಟರ್, - ವೆಬ್ಸ್‌ ಜಂಕ್ಷನ್,- ಟ್ರಿನಿಟಿ ಚರ್ಚ್ ರಸ್ತೆ, ಎಎಸ್‌ಸಿ ಸೆಂಟರ್, ದೊಮ್ಮಲೂರು ರಸ್ತೆ, ಇಂದಿರಾನಗರ ನೂರು ಅಡಿ ರಸ್ತೆ ಮತ್ತು ಎಚ್‌ಎಎಲ್ ರಸ್ತೆಯ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾ ಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry