ಭಾನುವಾರ, ಏಪ್ರಿಲ್ 18, 2021
32 °C

ರಾಷ್ಟ್ರಮಟ್ಟದ ಅಥ್ಲೀಟುಗಳು ಮೂಡಿಬರಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರ್ಕಳ: ತಾಲ್ಲೂಕು ಕ್ರೀಡಾಂಗಣದಲ್ಲಿ ಕ್ರೀಡಾ ತರಬೇತಿ ಪಡೆದು ರಾಷ್ಟ್ರಮಟ್ಟದ ಕ್ರೀಡಾಳುಗಳು ಮೂಡಿ ಬರಲಿ ಎಂದು ಶಾಸಕ ಗೋಪಾಲ ಭಂಡಾರಿ ಸೋಮವಾರ ಇಲ್ಲಿ ಹಾರೈಸಿದರು.ಇಲ್ಲಿನ ತಾಲ್ಲೂಕು ಕ್ರೀಡಾಂಗಣದಲ್ಲಿ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಉಡುಪಿ ಜಿಲ್ಲಾ ಪಂಚಾಯಿತಿ, ಜಿಲ್ಲಾ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಕ್ರೀಡಾ ಪ್ರಾಧಿಕಾರ, ತಾಲ್ಲೂಕು ಪಂಚಾಯಿತಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಉಚಿತ ಅಥ್ಲೆಟಿಕ್‌ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಕಾರ್ಕಳ ತಾಲ್ಲೂಕು ಕ್ರೀಡಾಂಗಣ ವಿಸ್ತೃತವಾದುದು. ಇದನ್ನು ಉತ್ತಮ ತರಬೇತಿಗಾಗಿ ಬಳಸಿಕೊಳ್ಳುವ ಮೂಲಕ ಒಳ್ಳೆಯ ಕ್ರೀಡಾಪಟುಗಳನ್ನು ರೂಪಿಸಬಹು. ತಾಲ್ಲೂಕಿನ ಮಮತಾ ಪೂಜಾರಿ, ಸೌಮ್ಯಶ್ರೀ ಹಾಗೂ ಪ್ರೀತಿ ಮೊದಲಾದವರು ರಾಷ್ಟ್ರ ಮಟ್ಟದಲ್ಲಿ ಈಗಾಗಲೇ ಮಿಂಚಿದ್ದಾರೆ. ಮತ್ತಷ್ಟು ಕ್ರೀಡಾಪಟುಗಳೂ ಮೂಡಿಬರುವಂತಾಗಲಿ ಎಂದ ಅವರು, ಸಹಾಯಕ ಯುವಜನ ಸೇವೆ ಮತ್ತು ಕ್ರೀಡಾಧಿಕಾರಿ ಶ್ರಮವನ್ನು ಶ್ಲಾಘಿಸಿದರು.ಪುರಸಭೆ ಅಧ್ಯಕ್ಷೆ ಪ್ರತಿಮಾ ಮೋಹನ್‌ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಸೀತಾನದಿ ವಿಠಲ ಶೆಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ರಂಗಧಾಮಪ್ಪ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ರವೀಂದ್ರ ಕುಮಾರ್‌, ದೈಹಿಕ ಶಿಕ್ಷಣ ಪರಿವೀಕ್ಷಕ ಬಾಬು ಪೂಜಾರಿ, ಪುರಸಭಾ ಸದಸ್ಯ ಪ್ರಕಾಶ ರಾವ್‌, ಅಶ್ಫಕ್‌ ಅಹಮದ್‌, ತರಬೇತುದಾರ ಅನಂತರಾಮ್‌, ಮಿಯಾರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮಾಲಿನಿ, ತಾಲ್ಲೂಕು ಪಂಚಾಯಿತಿ ಸದಸ್ಯ ನಾಗಪ್ಪ ಮೇರ, ಪೆರ್ವಾಜೆ ಶಾಲೆಯ ಅಣ್ಣಿ ಎಂ, ಯುವಜನ ಸೇವಾ ಮತ್ತು ಕ್ರೀಡಾಧಿಕಾರಿ ಎಚ್‌ಕೆ ಗಣಪಯ್ಯ ಮತ್ತಿತರರು ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.