ಬುಧವಾರ, ಮೇ 18, 2022
26 °C

ರಾಷ್ಟ್ರಮಟ್ಟದ ಅರ್ಹತಾ ಪರೀಕ್ಷೆ ರದ್ದು ಮಾಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ವೃತ್ತಿ ಶಿಕ್ಷಣ ಪ್ರವೇಶ ಕುರಿತಂತೆ ಮುಂದಿನ ವರ್ಷದಿಂದ ಸಿಇಟಿ ಬದಲು ರಾಷ್ಟ್ರಮಟ್ಟದಲ್ಲಿ ಎನ್.ಇ.ಇ.ಟಿ. ಹಾಗೂ ಐ.ಎಸ್.ಇ.ಇ.ಟಿ  ಪರೀಕ್ಷೆ ನಡೆಸಲಾಗುವುದು ಎಂಬ ರಾಜ್ಯ ಸಚಿವರ ಹೇಳಿಕೆ ಕುರಿತು ಭಾನುವಾರ ನಗರದ ಕನ್ನಡ ಭವನದಲ್ಲಿ ಪರೀಕ್ಷೆಯ ಸಾಧಕ ಬಾಧಕ ಕುರಿತು `ದ್ವಿತೀಯ ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳ ಹಿತರಕ್ಷಣಾ ಸಮಿತಿ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳ ಪಾಲಕರು ಸಭೆ ಸೇರಿ ಚರ್ಚೆ ನಡೆಸಿದರು.ರಾಷ್ಟ್ರಮಟ್ಟದ ಎನ್‌ಇಇಟಿ ಹಾಗೂ ಐಎಸ್‌ಇಇಟಿ ಪರೀಕ್ಷೆಗೆ ಹೋಲಿಸಿದರೆ. ರಾಜ್ಯಮಟ್ಟದ ಪಠ್ಯ ಕ್ರಮವು ಶೇ 40ರಷ್ಟು ವ್ಯತ್ಯಾಸವಿದ್ದು, ಇದರಿಂದ ರಾಜ್ಯದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತದೆ. ರಾಷ್ಟ್ರ ಮಟ್ಟದಲ್ಲಿ ನಡೆಸಲಿರುವ ಪರೀಕ್ಷೆಯಲ್ಲಿ ಅನೇಕ ಲೋಪ ದೋಷವಿದ್ದು, ಸರಿಪಡಿಸುವಂತೆ ಸಭೆಯಲ್ಲಿ ಸರ್ಕಾರಕ್ಕೆ ಆಗ್ರಹಿಸಲಾಯಿತು.ಕರ್ನಾಟಕದಲ್ಲಿ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಸೀಟು ಹೆಚ್ಚಿನ ಪ್ರಮಾಣದಲ್ಲಿದ್ದು, ಇದೇ ವರ್ಷ ವೃತ್ತಿ ಶಿಕ್ಷಣ ಪ್ರವೇಶ ಕುರಿತಂತೆ ರಾಷ್ಟ್ರ ಮಟ್ಟದಲ್ಲಿ ನಡೆಸುವ ಪರೀಕ್ಷೆಯಿಂದ ರಾಜ್ಯ ವಿದ್ಯಾರ್ಥಿಗಳಿಗೆ ವೈದ್ಯಕೀಯ ಹಾಗೂ ಎಂಜನಿಯರಿಂಗ್ ಸೀಟು ಕೈ ತಪ್ಪಲಿವೆ. ಶೇ 90ರಷ್ಟು ಬೇರೆ ರಾಜ್ಯದ ವಿದ್ಯಾರ್ಥಿಗಳು ಆ ಸೀಟು ಪಡೆದುಕೊಳ್ಳುತ್ತಾರೆ. ಆದ ಕಾರಣ ರಾಷ್ಟ್ರ ಮಟ್ಟದ ಅರ್ಹತಾ ಪರೀಕ್ಷೆ ರದ್ದು ಮಾಡಿ, ರಾಜ್ಯ ಮಟ್ಟದ ಅರ್ಹತಾ ಪರೀಕ್ಷೆಯನ್ನೇ ಮುಂದುವರಿಸುವಂತೆ ಸರ್ಕಾರಕ್ಕೆ ಸಮಿತಿ ಒತ್ತಾಯಿಸಿತು.ಸಭೆಯಲ್ಲಿ ಸಮಾನ ಮನಸ್ಕರು, ಶಿಕ್ಷಣ ತಜ್ಞರು, ಶಿಕ್ಷಕರು ಹಾಗೂ ಪಾಲಕರ ಪಾಲ್ಗೊಂಡಿದ್ದರು.

ಪ್ರಹ್ಲಾದ ಬುರ್ಲಿ ಅತಿಥಿಗಳಾಗಿದ್ದರು. ಡಾ. ಎಸ್.ಎಸ್. ಹೆಬ್ಬಾಳ ಅಧ್ಯಕ್ಷತೆ ವಹಿಸಿದ್ದರು. ಪ್ರಾಸ್ತಾವಿಕವಾಗಿ ಅರುಣಕುಮಾರ ಪಾಟೀಲ ಮಾತನಾಡಿದರು. ಗುರುಬಸಪ್ಪ ಪಾಟೀಲ ನಿರೂಪಿಸಿದರು. ಶಿವಕುಮಾರ ಬಿರಾದಾರ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.