ರಾಷ್ಟ್ರಮಟ್ಟದ ಟಿಟಿ: ದೆಹಲಿ ಶಾಲೆ ಚಾಂಪಿಯನ್

7

ರಾಷ್ಟ್ರಮಟ್ಟದ ಟಿಟಿ: ದೆಹಲಿ ಶಾಲೆ ಚಾಂಪಿಯನ್

Published:
Updated:

ವಿಜಾಪುರ: ಇಲ್ಲಿಯ ಸೈನಿಕ ಶಾಲೆಯಲ್ಲಿ ಶುಕ್ರವಾರ ನಡೆದ ಐಪಿಎಸ್‌ಸಿ (ಇಂಡಿಯನ್ ಪಬ್ಲಿಕ್ ಸ್ಕೂಲ್ ಕಾನ್ಫೆರೆನ್ಸ್) ರಾಷ್ಟ್ರಮಟ್ಟದ ಟೇಬಲ್ ಟೆನಿಸ್ ಟೂರ್ನಿಯಲ್ಲಿ ನವದೆಹಲಿಯ ಮಾಡರ್ನ್ ಶಾಲೆ ಸಮಗ್ರ ಚಾಂಪಿಯನ್‌ಷಿಪ್ ತನ್ನದಾಗಿಸಿಕೊಂಡಿತು.  ಟೂರ್ನಿಯ 14 ವರ್ಷ ಒಳಗಿನವರ ವಿಭಾಗದ ಫೈನಲ್‌ನಲ್ಲಿ ನವದೆಹಲಿಯ ಮಾಡರ್ನ್ ಶಾಲೆಯ ವಿದ್ಯಾರ್ಥಿ ಶಿವಂ ಗುಪ್ತಾ 11-7, 11-8, 11-2ರ ಅಂತರದಿಂದ ರಾಜ್‌ಕೋಟ್‌ನ ದರ್ಶಿತ್ ಬರಾಡ್‌ರನ್ನು ಮಣಿಸಿದರು. ರಾಜ್‌ಕೋಟ್‌ನ ಕರ್ಮವೀರ ಸಿಂಗ್ ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.ಮಾರ್ಡನ್ ಶಾಲೆಯ ಮತ್ತೊಬ್ಬ ಸ್ಪರ್ಧಿ ಆಕಾಶ ಬಲೋತಿಯಾ 17 ವರ್ಷ ಒಳಗಿನವರ ಫೈನಲ್‌ನಲ್ಲಿ 11-5, 11-8, 11-4ರಿಂದ ಬೆಳಗಾವಿಯ ರಾಷ್ಟ್ರೀಯ ಮಿಲಿಟರಿ ಶಾಲೆಯ ರುದ್ರಪ್ರತಾಪ ಚೌಧರಿ ಅವರನ್ನು ಪರಾಭವಗೊಳಿಸಿದರು. ಸಾಹಿಲ್ ಭಾರ್ಗವ ತೃತೀಯ ಸ್ಥಾನ ಪಡೆದರು.19 ವರ್ಷ ವಯಸ್ಸಿನ ಒಳಗಿನವರ ಫೈನಲ್‌ನಲ್ಲಿ ದೆಹಲಿ ಮಾರ್ಡನ್ ಶಾಲೆಯ ರಿಸಬ್ ಸಚ್ಚದೇವ್ 13-11, 07-11, 11-9, 12-10 ರಿಂದ ಮೋಚಕ್ ಸೋನಿ ಎದುರು ಗೆಲುವು ಪಡೆದರು. ಇದೇ ಶಾಲೆಯ ಪಿ. ರಾಘವ್ ತೃತೀಯ ಸ್ಥಾನ ಗಳಿಸಿದರು.ಗುಂಪು ವಿಭಾಗದ ಫಲಿತಾಂಶ ಇಂತಿದೆ: 14 ವರ್ಷ ಒಳಗಿನವರ ವಿಭಾಗ: ರಾಜಕುಮಾರ ಕಾಲೇಜು, ರಾಜ್‌ಕೋಟ್-1, ನವದೆಹಲಿಯ ಮಾಡರ್ನ್ ಶಾಲೆ, ನವದೆಹಲಿ-2, ವಲ್ಲಭ ಆಶ್ರಮದ ಶಾಲೆ, ವಲ್ಸಾಡ್-317 ವರ್ಷ ಒಳಗಿನವರ ವಿಭಾಗ: ಮಾಡರ್ನ್ ಶಾಲೆ, ನವದೆಹಲಿ-1, ಫಿನಿಕ್ಸ್ ಪಬ್ಲಿಕ್ ಶಾಲೆ, ಬೆಳಗಾವಿ-2, ರಾಷ್ಟ್ರೀಯ ಮಿಲಿಟರಿ ಶಾಲೆ, ಬೆಳಗಾವಿ-319 ವರ್ಷದೊಳಗಿನ ವಿಭಾಗ: ಮಾಡರ್ನ್ ಶಾಲೆ, ನವದೆಹಲಿ-1, ರಾಜಕುಮಾರ ಕಾಲೇಜು, ರಾಜ್‌ಕೋಟ್-2, ಪ್ರವರ ಪಬ್ಲಿಕ್ ಸ್ಕೂಲ್, ಅಹಮದ್‌ನಗರ್-3.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry