ರಾಷ್ಟ್ರಾಧ್ಯಕ್ಷರ ಕಚೇರಿ ಸುತ್ತ ಸೇನಾ ಟ್ಯಾಂಕ್ ಜಮಾವಣೆ

7

ರಾಷ್ಟ್ರಾಧ್ಯಕ್ಷರ ಕಚೇರಿ ಸುತ್ತ ಸೇನಾ ಟ್ಯಾಂಕ್ ಜಮಾವಣೆ

Published:
Updated:

ಕೈರೊ (ಪಿಟಿಐ): ಈಜಿಪ್ಟ್ ರಾಷ್ಟ್ರಾಧ್ಯಕ್ಷ ಹಾಗೂ ವಿರೋಧಿಗಳ ನಡುವೆ ಗುರುವಾರ ರಾತ್ರಿ ನಡೆದ ಕಾಳಗದಲ್ಲಿ ಐವರು ಸಾವಿಗೀಡಾದ  ನಂತರ, ಶುಕ್ರವಾರ ಇಲ್ಲಿನ ರಾಷ್ಟ್ರಾಧ್ಯಕ್ಷರ ಅರಮನೆಯ ಸುತ್ತ ಸೇನಾ ಟ್ಯಾಂಕುಗಳು ಜಮಾವಣೆಗೊಂಡಿವೆ.ಒಂದೆಡೆ, ವಿವಾದಾತ್ಮಕ ಕರಡು ಸಂವಿಧಾನದ ವಿರುದ್ಧ ಆಕ್ರೋಶ ಮಡುಗಟ್ಟುತ್ತಿದ್ದರೆ ಮತ್ತೊಂದೆಡೆ ರಾಷ್ಟ್ರಾಧ್ಯಕ್ಷರ ಅರಮನೆ ಸುತ್ತ ಇಸ್ಲಾಂವಾದಿ ಅಧ್ಯಕ್ಷ ಮೊಹಮ್ಮದ್ ಮೊರ್ಸಿ ಪರ ಘೋಷಣೆಗಳು ಮೊಳಗುತ್ತಿವೆ. ಮೊರ್ಸಿ ವಿರೋಧಿಗಳು ಮುಸ್ಲಿಂ ಬ್ರದರ್‌ಹುಡ್‌ನ ರಾಜಕೀಯ ಘಟಕವಾದ `ಫ್ರೀಡಂ ಅಂಡ್ ಜಸ್ಟೀಸ್ ಪಾರ್ಟಿ'ಯ ಪ್ರಧಾನ ಕಚೇರಿ ಮತ್ತು ಹಲವು ನಗರಗಳಲ್ಲಿರುವ ಕಚೇರಿಗಳ ಮೇಲೆ ದಾಳಿ ನಡೆಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry