ಮಂಗಳವಾರ, ಅಕ್ಟೋಬರ್ 15, 2019
28 °C

ರಾಷ್ಟ್ರಾಧ್ಯಕ್ಷರ ಸ್ಪಷ್ಟನೆ ಕೇಳಲಿ: ರಾಮಣ್ಣ

Published:
Updated:

ರಾಯಚೂರು:  ದಲಿತ ಸಾಹಿತ್ಯ ಆಕಾಡೆಮಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಶಿಕ್ಷಕ ನರಸಿಂಹಲು ಹಾಗೂ ಸಂಗಡಿಗರು ತಮ್ಮ ಬಗ್ಗೆ ಆರೋಪ ಮಾಡುವುದು ಸರಿಯಲ್ಲ. ಈ ಆರೋಪದಲ್ಲಿ ಯಾವುದೇ ಹುರಳಿಲ್ಲ. ಆರೋಪ ಪಟ್ಟಿಯನ್ನು ಗಮನಿಸಿದರೆ ಅವರ ಹಿಂದೆ ಒಂದು ದೊಡ್ಡ ಪಿತೂರಿಯ ತಂಡವಿದೆ ಎಂಬುದು ಅರ್ಥವಾಗುತ್ತದೆ ಎಂದು ಭಾರತೀಯ ದಲಿತ ಸಾಹಿತ್ಯ ಆಕಾಡೆಮಿ ರಾಜ್ಯ ಘಟಕದ ಅಧ್ಯಕ್ಷ ರಾಮಣ್ಣ ಆರ‌್ಹೆಜ್ಜೆ ಅವರು ತಿಳಿಸಿದ್ದಾರೆ.ಈ ಬಗ್ಗೆ ಪ್ರಕಟಣೆ ಮೂಲಕ ಸ್ಪಷ್ಟನೆ ನೀಡಿರುವ ಅವರು, ಕಳೆದ ಮೂರು ದಶಕಗಳಿಂದ ಸಾಹಿತ್ಯ  ಹಾಗೂ ದಲಿತ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ಕಾಲು ದಶಕಗಳಿಂದ ಕಾರ್ಯ ನಿರ್ವಹಿಸುತ್ತಿರುವ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯ ರಾಷ್ಟ್ರಾಧ್ಯಕ್ಷರು ಕರ್ನಾಟಕ ಘಟಕಕ್ಕೆ 2009 ರಲ್ಲಿ ತಮ್ಮನ್ನು  ನೇಮಕ ಮಾಡಲಾಗಿತ್ತು ಎಂದು ವಿವರಿಸಿದ್ದಾರೆ.ಈ ಮುಂಚೆ ಕರ್ನಾಟಕ ಘಟಕದ ರಾಜ್ಯಾಧ್ಯಕ್ಷರು ಕೇವಲ ಬೆರಳೆಣಿಕೆಯಷ್ಟು ಜನರಿಗೆ ಪ್ರಶಸ್ತಿ ಘೋಷಿಸಿ ದೆಹಲಿಗೆ ಕಳುಹಿಸುತ್ತಿದ್ದರು. ರಾಷ್ಟ್ರಾಧ್ಯಕ್ಷರಿಗೆ ಕರ್ನಾಟಕದಲ್ಲಿ ಯಾರು ದಲಿತ ಸಾಹಿತಿ ಹಾಗೂ ಸಮಾಜ ಸೇವಕರ ಬಗ್ಗೆ ಯಾವುದೇ ಮಾಹಿತಿ ಇಲ್ಲದೇ ನೇರವಾಗಿ ತಾವೇ ಅಂಬೇಡ್ಕರ್ ಪ್ರಶಸ್ತಿಯನ್ನು ನೀಡುತ್ತಿದ್ದರು ಎಂದು ಹೇಳಿದ್ದಾರೆ.ಕಳೆದ ಎರಡು ವರ್ಷಗಳಿಂದ ಈ ಸಂಘಟನೆಯನ್ನು ಪರಿಚಯಿಸುವುದರ ಮೂಲಕ 9 ಜಿಲ್ಲೆಗಳಲ್ಲಿ ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಿರುತ್ತೇನೆ. 27ನೇ ದಲಿತ ಸಾಹಿತ್ಯ ಸಮ್ಮೇಳನಕ್ಕೆ ನಿರೀಕ್ಷೆಗೂ ಮೀರಿ ಪ್ರತಿನಿಧಿಗಳು ಭಾಗವಹಿಸಿರುವುದರಿಂದ ಹಾಗೂ ಪ್ರಶಸ್ತಿಗೆ ಆಯ್ಕೆಯಾಗದ  ಸಾಮಾನ್ಯ ಪ್ರತಿನಿಧಿಗಳು ನಿಯಮ ಬಾಹಿರವಾಗಿದೆ.

 

ಪ್ರಶಸ್ತಿ ಪಡೆದ ಅರ್ಹ ವಿಜೇತರಿಗೆ ಪ್ರಶಸ್ತಿ ದೊರಕದಂತೆ ಗೊಂದಲ ಸೃಷ್ಟಿಸಿದ್ದರು ಎಂದು ಆರೋಪಿಸಿದರು.

ಕೇವಲ  ನಾಲ್ಕು ಕಲರ್‌ನೊಳಗೆ ಯಾವುದಾದರೂ ಒಂದು ಐಡಿ   ಕಾರ್ಡ್ ತೋರಿಸಿದ್ದರೂ ಸಾಕು ಅವರಿಗೆ ಪ್ರಶಸ್ತಿ ನೀಡುತ್ತಿದ್ದರು. ಹೀಗೆ ಹತ್ತು ಹಲವು ನೂನ್ಯತೆಗಳೊಂದಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇದಕ್ಕೆ ನೇರಹೊಣೆ ರಾಷ್ಟ್ರಾಧ್ಯಕ್ಷರೇ ಹೊರತು ರಾಜ್ಯಾಧ್ಯಕ್ಷರಲ್ಲ. ಈ ಎಲ್ಲ ಆಗು ಹೋಗುಗಳಿಗೆ ಹಾಗೂ ಗೊಂದಲಗಳಿಗೆ ರಾಷ್ಟ್ರಾಧ್ಯಕ್ಷರಿಂದ ಸ್ಪಷ್ಟೀಕರಣ ಪಡೆಯಬೇಕು ಎಂದು ಒತ್ತಾಯಿಸಿದರು.ದೆಹಲಿಯಲ್ಲಿ ನಡೆದ ವಿದ್ಯಮಾನಗಳಿಗೆ ಮತ್ತು ರಾಷ್ಟ್ರಾಧ್ಯಕ್ಷರ ಸರ್ವಾಧಿಕಾರ ಧೋರಣೆಗೆ ಮನನೊಂದು ಹಾಗೂ ನೈತಿಕ ಹೊಣೆ ಹೊತ್ತು  ತಾವು ಅಧ್ಯಕ್ಷ ಸ್ಥಾನಕ್ಕೆ ದೆಹಲಿಯಲ್ಲಿಯೇ ರಾಷ್ಟ್ರಾಧ್ಯಕ್ಷರಿಗೆ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Post Comments (+)