ಮಂಗಳವಾರ, ಮೇ 18, 2021
23 °C

ರಾಷ್ಟ್ರೀಯ ಕ್ರಿಕೆಟ್ ಶಿಬಿರಕ್ಕೆ ಸಮರ್ಥ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: ಧಾರವಾಡದ ವಸಂತ ಮುರ್ಡೇಶ್ವರ ಕ್ರಿಕೆಟ್ ಅಕಾಡಮಿ (ವಿ.ಎಂ.ಸಿ.ಎ.) ಹಾಗೂ ಕ್ರಿಕೆಟ್ ಕ್ಲಬ್ ಆಫ್ ಕರ್ನಾಟಕದ (ಸಿ.ಸಿ.ಕೆ.) ಆರಂಭಿಕ ಆಟಗಾರ ಸಮರ್ಥ ಊಟಿ,  ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮುಂಬೈನಲ್ಲಿ ಪ್ರಾರಂಭಿಸಿರುವ ಅಖಿಲ ಭಾರತ ~ಪರಿಣಿತ ಬ್ಯಾಟ್ಸಮನ್~ಗಳ ತರಬೇತಿ ಶಿಬಿರಕ್ಕೆ ಆಯ್ಕೆಗೊಂಡಿದ್ದಾರೆ.ಈ ಶಿಬಿರ ಮುಂಬೈ ಕ್ರಿಕೆಟ್ ಸಂಸ್ಥೆ (ಎಂ.ಸಿ.ಎ)ಯಲ್ಲಿ ಸೆ. 20ರಿಂದ ಅ.10ರವರೆಗೆ ನಡೆಯಲಿದೆ. ಕಳೆದ ವರ್ಷ ನಡೆದ 16ಕ್ಕಿಂತ ಕಿರಿಯರ ಕ್ರಿಕೆಟ್ ಟೂರ್ನಿಯಲ್ಲಿ ನೀಡಿದ ಬ್ಯಾಟಿಂಗ್ ಸಾಧನೆಯ ಆಧಾರದ ಮೇಲೆ ಬಿಸಿಸಿಐ ಇಡೀ ರಾಷ್ಟ್ರದ ಏಳು ಪ್ರತಿಭಾನ್ವಿತ ~ಸ್ಪೆಷಲಿಸ್ಟ್ ಬ್ಯಾಟ್ಸಮನ್~ಗಳನ್ನು ಆಯ್ಕೆ ಮಾಡಿದ್ದು, ಆ ಪೈಕಿ ಸಮರ್ಥ ಊಟಿ ಒಬ್ಬರು. ಅವರು ಕರ್ನಾಟಕದಿಂದ ಆಯ್ಕೆಯಾಗಿರುವ ಏಕೈಕ ಆಟಗಾರರೂ ಹೌದು.ಹಿರಿಯ ತರಬೇತುದಾರರಾದ ವಸಂತ ಮುರ್ಡೇಶ್ವರ, ಪ್ರಭಾಕರ ಕಾಗಲಕರ ಹಾಗೂ ಶಿವಪ್ರಕಾಶ ಶಿರಕೋಳ ಅವರು ಸಮರ್ಥ ಅವರನ್ನು ಅಭಿನಂದಿಸಿ ಶುಭ ಕೋರಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.