ರಾಷ್ಟ್ರೀಯ ಕ್ರೀಡಾಕೂಟ: ಜ್ಯೋತಿ ಓಟಕ್ಕೆ ಬೆಳ್ಳಿ ಗೌರವ

7

ರಾಷ್ಟ್ರೀಯ ಕ್ರೀಡಾಕೂಟ: ಜ್ಯೋತಿ ಓಟಕ್ಕೆ ಬೆಳ್ಳಿ ಗೌರವ

Published:
Updated:

ರಾಂಚಿ: ಕರ್ನಾಟಕದ ಎಚ್.ಎಂ. ಜ್ಯೋತಿ ಅವರು ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕ್ರೀಡಾಕೂಟದ ಮಹಿಳೆಯರ ವಿಭಾಗದ 200 ಮೀ. ಓಟದ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಪಡೆದರು.ಸೋಮವಾರ ನಡೆದ ಸ್ಪರ್ಧೆಯಲ್ಲಿ (ಕಾಲ 24:27ಸೆ) ಗುರಿ ತಲುಪಿದ ಜ್ಯೋತಿ ಸ್ಪಲ್ಪದರಲ್ಲಿಯೇ ಚಿನ್ನದ ಪದಕ ಜಯಿಸುವ ಅವಕಾಶದಿಂದ ವಂಚಿತರಾದರು.24.05ಸೆಕೆಂಡುಗಳಲ್ಲಿ ಗುರಿ ತಲುಪಿದ ಆಂಧ್ರಪ್ರದೇಶದ ಜಿ. ಮೌನಿಕಾ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಕೇರಳದ ವಿ. ಶಾಂತಿನಿ (ಕಾಲ: 24.73ಸೆ) ಗುರಿ ಮುಟ್ಟಿ ಕಂಚಿಗೆ ತೃಪ್ತಿಪಟ್ಟುಕೊಂಡರು.ಬ್ಯಾಡ್ಮಿಂಟನ್‌ನಲ್ಲಿ ಬೆಳ್ಳಿ: ರಾಷ್ಟ್ರೀಯ ಕ್ರೀಡಾಕೂಟದ ಪುರುಷರ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಕರ್ನಾಟಕದ ಆದಿತ್ಯ ಪ್ರಕಾಶ್ ಬೆಳ್ಳಿ ಪದಕ ಜಯಿಸಿದರು. ಪ್ರಬಲ ಪೈಪೋಟಿ ಒಡ್ಡಿದ ಆಂಧ್ರಪ್ರದೇಶದ ಗುರು ಸಾಯಿದತ್ 16-21, 21-10, 21-18ರಲ್ಲಿ ಆದಿತ್ಯ ಅವರನ್ನು ಮಣಿಸಿ ಚಿನ್ನ ಗೆದ್ದರು.ಕೊಕ್ಕೊ ಸೆಮಿಫೈನಲ್‌ಗೆ ಕರ್ನಾಟಕ: ಕರ್ನಾಟಕದ ಪುರುಷರ ಕೊಕ್ಕೊ ತಂಡದವರು ಕ್ವಾರ್ಟರ್‌ಫೈನಲ್‌ನ ಕೊನೆಯ ಗುಂಪಿನ ಪಂದ್ಯದಲ್ಲಿ 21-11ರಲ್ಲಿ ಆಂಧ್ರಪ್ರದೇಶ ತಂಡವನ್ನು ಮಣಿಸಿ ಸೆಮಿಫೈನಲ್ ಪ್ರವೇಶಿಸಿದರು. ನಾಲ್ಕರ ಘಟ್ಟದಲ್ಲಿ ಕರ್ನಾಟಕ ಕೇರಳ ತಂಡದ ಸವಾಲನ್ನು ಎದುರಿಸಲಿದೆ.ದುರ್ಗಾರಾವ್‌ಗೆ ಜಯ: ಕರ್ನಾಟಕದ ವಿ. ದುರ್ಗಾರಾವ್ ಅಪ್ಪಣ್ಣ ಅವರು ಲೈಟ್ ವೇಟ್‌ನ 60ಕೆಜಿ ವಿಭಾಗದಲ್ಲಿ 5-3ರಲ್ಲಿ ಪಶ್ಚಿಮ ಬಂಗಾಳದ ಅಮಿತ್ ಕುಮಾರ್ ರಾಯ್ ಅವರನ್ನು ಮಣಿಸಿದರು.ಟೆನಿಸ್;
ಹೊರಬಿದ್ದ ಕರ್ನಾಟಕ: ಕರ್ನಾಟಕದ ಟೆನಿಸ್ ಆಟಗಾರರು ರಾಷ್ಟ್ರೀಯ ಕ್ರೀಡಾಕೂಟದ ಪ್ರಿ ಕ್ವಾರ್ಟರ್‌ಫೈನಲ್ ಪಂದ್ಯದ ಸಿಂಗಲ್ಸ್‌ನಲ್ಲಿ ಸೋಲು ಅನುಭವಿಸಿದರು.ಪುರುಷರ ವಿಭಾಗದಲ್ಲಿ ರಶೀನ್ ಸ್ಯಾಮಿಯುಲ್ 4-6, 1-6ರಲ್ಲಿ ಆಂಧ್ರಪ್ರದೇಶದ ಚಡ್ರಿಲ್ ಸೂಡ್ ವಿರುದ್ಧವೂ, ಸುರೇಶ್ ಕಮಲ್ 2-6, 1-6ರಲ್ಲಿ ತಮಿಳುನಾಡಿದ ಇರ್ಫಾನ್ ಹುಸೇನ್ ಎದುರೂ ಸೋಲು ಕಂಡರು. ಮಹಿಳೆಯರ ವಿಭಾಗದ ಸಿಂಗಲ್ಸ್‌ನಲ್ಲಿ ಪ್ರೇರಣಾ ಪ್ರತಾಪ್ 5-7, 1-6ರಲ್ಲಿ ಆಂಧ್ರಪ್ರದೇಶದ ಸಜ್ಜಾದ್ ಜೈನಬ್ ಅಲಿ ಎದುರೂ, ಯು.ಎಂ. ಶಲಾಕ್ 3-6, 3-6ರಲ್ಲಿ ದೆಹಲಿಯ ಪ್ರೇರಣಾ ಬಾಂಬ್ರಿ ಮೇಲೂ ನಿರಾಸೆ ಅನುಭವಿಸಿದರು.ಅಥ್ಲೆಟಿಕ್ಸ್‌ನ ಫಲಿತಾಂಶ: ಪುರುಷರ 200ಮೀ. ಓಟ: ನಿತಿನ್ ಕುಮಾರ್ (ಸರ್ವಿಸಸ್ ಕಾಲ: 21.74ಸೆ), ಎಂ. ಮಣಿಕಂದರಾಜ್ (ಆಂಧ್ರಪ್ರದೇಶ ಕಾಲ: 21.74ಸೆ), ಅಬ್ದುಲ್ ನಜೀಬ್ ಖುರೇಷಿ (ಅಂಧ್ರಪ್ರದೇಶ, ಕಾಲ: 21;75ಸೆ).ಮಹಿಳೆಯರ ವಿಭಾಗ: 200ಮೀ ಓಟ: ಜಿ. ಮೌನಿಕಾ (ಆಂಧ್ರಪ್ರದೇಶ ಕಾಲ 24.05ಸೆ), ಎಚ್.ಎಂ. ಜ್ಯೋತಿ (ಕರ್ನಾಟಕ 24.27ಸೆ), ವಿ. ಶಾಂತಿನಿ (ಕೇರಳ; ಕಾಲ: 24.73ಸೆ).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry