ರಾಷ್ಟ್ರೀಯ ಕ್ರೀಡಾಕೂಟ ವೀಕ್ಷಿಸಿದ ದೋನಿ

7

ರಾಷ್ಟ್ರೀಯ ಕ್ರೀಡಾಕೂಟ ವೀಕ್ಷಿಸಿದ ದೋನಿ

Published:
Updated:

ರಾಂಚಿ (ಐಎಎನ್‌ಎಸ್): ಭಾರತ ತಂಡದ ನಾಯಕ ಮಹೇಂದ್ರಸಿಂಗ್ ದೋನಿ ಅವರು ಭಾನುವಾರ ರಾಂಚಿಗೆ ಭೇಟಿ ನೀಡಿ ರಾಷ್ಟ್ರೀಯ ಕ್ರೀಡಾಕೂಟವನ್ನು ವೀಕ್ಷಿಸಿದರು.ಬಿರ್ಸಾ ಮುಂದಾ ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಜಾರ್ಖಂಡ್ ಹಾಗೂ ಗೋವಾ ನಡುವಿನ ಫುಟ್‌ಬಾಲ್ ಪಂದ್ಯವನ್ನು ದೋನಿ ನೋಡಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ತವರಿಗೆ ತೆರಳಲು ಅನುಮತಿ ನೀಡಿದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹಾಗೂ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದರು.‘ರಾಷ್ಟ್ರೀಯ ಕ್ರೀಡಾಕೂಟವು ಜಾರ್ಖಂಡ್ ರಾಜ್ಯದಲ್ಲಿ ನಡೆಯುತ್ತಿರುವುದು ಎಲ್ಲರಿಗೂ ಸಂತಸವನ್ನು ಉಂಟು ಮಾಡಿದೆ.ಇದೊಂದು ಹೆಮ್ಮೆಯ ಕ್ಷಣ. ಅಂತರರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾಪಟುಗಳು ಸಾಧನೆ ಮಾಡಲು ಅವಕಾಶಗಳನ್ನು ಕಲ್ಪಿಸುವುದು ಅಗತ್ಯವಿದೆ. ಅದಕ್ಕೆ ಈ ಕ್ರೀಡಾಕೂಟ ನೆರವಾಗಲಿದೆ’ ಎಂದು ‘ಮಹಿ’ ಹೇಳಿದರು.ಶನಿವಾರ ಭಾರತ ತಂಡ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ಎದುರು ಗೆದ್ದು ಶುಭಾರಂಭ ಮಾಡಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry