ರಾಷ್ಟ್ರೀಯ ಗ್ರಾಸ್ ಕೋರ್ಟ್ ಟೆನಿಸ್ ಟೂರ್ನಿ.ಸಾಗರ್ ಮಂಜಣ್ಣಗೆ ಜಯ

7

ರಾಷ್ಟ್ರೀಯ ಗ್ರಾಸ್ ಕೋರ್ಟ್ ಟೆನಿಸ್ ಟೂರ್ನಿ.ಸಾಗರ್ ಮಂಜಣ್ಣಗೆ ಜಯ

Published:
Updated:

ಕೋಲ್ಕತ್ತ (ಪಿಟಿಐ): ಕರ್ನಾಟಕದ ಸಾಗರ್ ಮಂಜಣ್ಣ ಅವರು ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಗ್ರಾಸ್ ಕೋರ್ಟ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಎರಡನೇ ಸುತ್ತು ಪ್ರವೇಶಿಸಿದ್ದಾರೆ.

ಸೋಮವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಮಂಜಣ್ಣ 6-4, 6-2ರಲ್ಲಿ ಮಹಾರಾಷ್ಟ್ರದ ರೋಹನ್ ಗೈಡ್ ಎದುರು ಗೆಲುವು ಸಾಧಿಸಿದರು.ಮೊದಲ ಸೆಟ್‌ನಲ್ಲಿ ಮಾತ್ರ ಕರ್ನಾಟಕದ ಆಟಗಾರ ಕೊಂಚ ಕಷ್ಟಪಡಬೇಕಾಯಿತು. ಆದರೆ ಎರಡನೇ ಸೆಟ್‌ನಲ್ಲಿ ಮಂಜಣ್ಣ ಎದುರಾಳಿಯ ಮೇಲೆ ಪೂರ್ಣ ಪಾರಮ್ಯ ಸಾಧಿಸಿದರು.ವಿಜಯ್‌ಗೆಆಘಾತ: ಟೂರ್ನಿಯಲ್ಲಿ ಅಗ್ರ ಶ್ರೇಯಾಂಕ ಪಡೆದಿರುವ ತಮಿಳುನಾಡಿನ ವಿಜಯ್ ಸುಂದರ್ ಪ್ರಶಾಂತ್ ಮೊದಲ ಸುತ್ತಿನಲ್ಲಿಯೇ ಆಘಾತ ಅನುಭವಿಸಿದ್ದಾರೆ.ಮಹಾರಾಷ್ಟ್ರದ ಆಕಾಶ್ ವಾಘ್ 7-6, 6-4ರಲ್ಲಿ ವಿಜಯ್ ಎದುರು ಗೆದ್ದರು. ಇನ್ನೊಂದು ಪಂದ್ಯದಲ್ಲಿ ದೆಹಲಿಯ ಶಾಂತಾನು ರಾಜ್‌ಪೂತ್ 7-6, 6-0ರಲ್ಲಿ ಮಹಾರಾಷ್ಟ್ರದ ರೋಣಕ್ ಮನುಜಾಗೆ ಶಾಕ್ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry