ಮಂಗಳವಾರ, ಜನವರಿ 28, 2020
19 °C

ರಾಷ್ಟ್ರೀಯ ಟೇಬಲ್ ಟೆನಿಸ್‌ಗೆ ಕರ್ನಾಟಕ ತಂಡಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪಶ್ಚಿಮ ಬಂಗಾಳದ ಸಿಲುಗುರಿಯಲ್ಲಿ ಜನವರಿ 3 ರಿಂದ 8ರ ವರೆಗೆ ನಡೆಯಲಿರುವ 73ನೇ ರಾಷ್ಟ್ರೀಯ ಜೂನಿಯರ್ ಹಾಗೂ ಯೂತ್ ಚಾಂಪಿಯನ್‌ಷಿಪ್ ಹಾಗೂ ಅಂತರ ರಾಜ್ಯ ಟೇಬಲ್ ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ತಂಡಗಳು ಭಾಗವಹಿಸಲಿವೆ.ಕರ್ನಾಟಕ ರಾಜ್ಯ ಟೇಬಲ್ ಟೆನಿಸ್ ಸಂಸ್ಥೆ ಈ ಚಾಂಪಿಯನ್‌ಷಿಪ್‌ಗೆ ಆಯ್ಕೆ ಮಾಡಲಾದ ಆಟಗಾರರ ಪಟ್ಟಿಯನ್ನು ಸಂಸ್ಥೆ ಕಾರ್ಯದರ್ಶಿ ಕೆ.ಎಸ್. ವಸಂತ್ ಕುಮಾರ್ ಭಾನುವಾರ ಬಿಡುಗಡೆ ಮಾಡಿದರು. ತಂಡಗಳು ಇಂತಿವೆ.ಜೂನಿಯರ್ ಬಾಲಕರ ವಿಭಾಗ: ವೇದಾಂತ್ ಎಂ. ಅರಸ್, ಶ್ರೇಯಲ್ ತೆಲಾಂಗ್, ಸುನಂದ್ ವಾಸನ್, ವಿ.ಪಿ. ಚರಣ್.; ಬಾಲಕಿಯರ ವಿಭಾಗ: ಎಂ.ವಿ. ಸ್ಪೂರ್ತಿ, ರಿಧಿ ರೋಹಿತ್, ಸಹನಾ ಕುಲಕರ್ಣಿ, ರಕ್ಷಾ ರಾಂಕುಮಾರ್.

ಯೂತ್ ಬಾಲಕರ ವಿಭಾಗ: ಎ.ಆರ್. ನವನೀತ್, ಶ್ರೇಯಲ್ ತೆಲಾಂಗ್, ಸುನಂದ್ ವಾಸನ್, ವಿ.ಪಿ. ಚರಣ್.; ಬಾಲಕಿಯರ ವಿಭಾಗ: ರಿಧಿ ರೋಹಿತ್, ಐಶ್ವರ್ಯ ಬಿದರಿ, ರಕ್ಷಾ ಂಕುಮಾರ್, ಸಹನಾ ಕುಲಕರ್ಣಿ.

ತರಬೇತಿದಾರರು: ಕೆ.ಎಸ್. ಕೇದಾರಿ, ಅನಿರ್‌ಬನ್ ತರ್ಫಾದಾರ್.; ಮ್ಯಾನೇಜರ್: ವಿಪುಲ್ ಚೌಗಲೆ.

ಪ್ರತಿಕ್ರಿಯಿಸಿ (+)