ಗುರುವಾರ , ಜನವರಿ 23, 2020
28 °C
ಮಾಜಿ ಪ್ರಧಾನಿ ದೇವೇಗೌಡ ವಿಶ್ಲೇಷಣೆ

ರಾಷ್ಟ್ರೀಯ ಪಕ್ಷಗಳ ವಿರುದ್ಧ ಜನಮತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ದೆಹಲಿಯಲ್ಲಿ ಆಮ್‌ ಆದ್ಮಿ ಪಕ್ಷವು (ಎಎಪಿ) ಗಳಿಸಿರುವ ಬೆಂಬ­­ಲವು ದೇಶದ ಜನರ ಭಾವನೆ­ಗಳನ್ನು ಸ್ಪಷ್ಟ­ವಾಗಿ ಸೂಚಿಸುತ್ತಿದ್ದು, ಪ್ರಾದೇಶಿಕ ಪಕ್ಷ­ಗಳು ಮುಂಬರುವ ಸಂದರ್ಭಕ್ಕೆ ಸಜ್ಜಾ­ಗಬೇಕಿದೆ ಎಂದು ಜೆಡಿ­­ಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌. ಡಿ. ­ದೇವೇಗೌಡ ಹೇಳಿದರು.ನಾಲ್ಕು ರಾಜ್ಯಗಳ ವಿಧಾನಸಭಾ ಚುನಾ­ವಣೆ ಫಲಿತಾಂಶ ಕುರಿತು ಪ್ರತಿ­ಕ್ರಿಯೆ ನೀಡಿದ ಅವರು, ‘ಎಎಪಿ ಎರಡು  ವರ್ಷಗಳ ಹಿಂದಷ್ಟೇ ಅಸ್ತಿತ್ವಕ್ಕೆ ಬಂದ ರಾಜಕೀಯ ಪಕ್ಷ. ಆದರೂ ದೆಹಲಿ­ಯಲ್ಲಿ ಗಣನೀಯ ಸಂಖ್ಯೆಯ ಸ್ಥಾನಗ­ಳನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ.ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್‌ ಮತ್ತು ಬಿಜೆಪಿ ವಿರುದ್ಧ ದೇಶದ ಜನತೆ­ಯಲ್ಲಿ ಆಕ್ರೋಶ ಮಡುಗಟ್ಟಿದೆ ಎಂಬುದು ಈ ಫಲಿತಾಂಶದಿಂದ ಸಾಬೀ­ತಾ­ಗಿದೆ. 2014ರ ಲೋಕಸಭಾ ಚುನಾ­ವಣೆಯಲ್ಲಿ ಪ್ರಾದೇಶಿಕ ಪಕ್ಷಗಳು ಮಹ­ತ್ವದ ಪಾತ್ರ ವಹಿಸಿಲಿವೆ ಎಂಬುದನ್ನು ಈ ಫಲಿತಾಂಶ ಎತ್ತಿ ತೋರಿಸುತ್ತಿದೆ’ ಎಂದರು.‘ನನ್ನ ಅಭಿಪ್ರಾಯದ ಪ್ರಕಾರ, ಈ ಚುನಾವಣೆಯಲ್ಲಿ ಯಾರು ಸೋತಿ­ದ್ದಾರೆ? ಯಾರು ಗೆಲುವು ಸಾಧಿಸಿದ್ದಾರೆ ಎಂಬುದು ಮುಖ್ಯವಲ್ಲ. ಜಾತಿ ಮತ್ತು ಧರ್ಮ ಆಧಾರಿತ ರಾಜಕಾರಣ ಯಶಸ್ಸು ಸಾಧಿಸುವುದಿಲ್ಲ ಎಂಬುದೂ ಸಾಬೀತಾಗಿದೆ.ಚುನಾವಣೆ ನಡೆದ ರಾಜ್ಯ­ಗಳಲ್ಲಿ ರಾಷ್ಟ್ರೀಯ ಪಕ್ಷಗಳು ಉಚಿತ­ವಾಗಿ ಅಕ್ಕಿ ವಿತರಣೆ, ವಿದ್ಯುತ್‌ ಪೂರೈಕೆಯಂತಹ ಯೋಜನೆಗಳನ್ನು ಜಾರಿ­­­ಗೊಳಿಸಿದ್ದವು. ಆದರೂ, ಆ ಪಕ್ಷ­ಗಳನ್ನು ಜನರು ಬೆಂಬಲಿಸಿಲ್ಲ. ಅಗ್ಗದ ಗಿಮಿಕ್‌ಗಳನ್ನೂ ತಿರಸ್ಕರಿಸಿದ್ದಾರೆ’ ಎಂದು ವಿಶ್ಲೇಷಿಸಿದರು.ಈ ಚುನಾವಣೆಯಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಪ್ರಭಾವ ಕುರಿತು ಪ್ರಶ್ನಿಸಿದಾಗ, ‘ದೆಹಲಿಯಲ್ಲಿ ಏಕೆ ಮೋದಿ ಪ್ರಭಾವ ಕೆಲಸ ಮಾಡಿಲ್ಲ ಎಂಬುದನ್ನು ತಿಳಿದು­ಕೊಳ್ಳಲಿ. ಇತರೆ ರಾಜ್ಯಗಳಲ್ಲಿ ಬಿಜೆಪಿಯ ಹೊರತಾದ ಪರ್ಯಾಯ ಇರಲಿಲ್ಲ. ಆದ್ದರಿಂದ ಅನಿವಾರ್ಯವಾಗಿ ಜನರು ಆ ಪಕ್ಷವನ್ನೇ ಬೆಂಬಲಿಸಿದ್ದಾರೆ’ ಎಂದರು.ರಾಜ್ಯದ ಮುಖ್ಯಮಂತ್ರಿ ಸಿದ್ದ­ರಾಮಯ್ಯ ಅವರು ಜಾತಿ ರಾಜಕಾರಣ­ದಲ್ಲಿ ನಿರತರಾಗಿದ್ದಾರೆ ಎಂದು ಆರೋಪಿ­ಸಿದ ದೇವೇಗೌಡರು, ‘ಜಾತಿ ಕಾರಣ­ದಿಂದ  ಲೋಕಸಭಾ ಚುನಾವಣೆಯಲ್ಲಿ ಮುನ್ನಡೆ ಸಾಧಿಸಲು ಸಾಧ್ಯವಿಲ್ಲ. ರಾಜ್ಯ­ದಾದ್ಯಂತ ರೈತರು ಸಮಸ್ಯೆಯಲ್ಲಿ ನರಳು­ತ್ತಿದ್ದಾರೆ. ಆದರೆ, ಮುಖ್ಯಮಂತ್ರಿ ಈ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರತಿಕ್ರಿಯಿಸಿ (+)