ರಾಷ್ಟ್ರೀಯ ಪಕ್ಷ ತಿರಸ್ಕರಿಸಲು ಸಲಹೆ

7

ರಾಷ್ಟ್ರೀಯ ಪಕ್ಷ ತಿರಸ್ಕರಿಸಲು ಸಲಹೆ

Published:
Updated:

ಬೀಳಗಿ: ಸ್ವಾತಂತ್ರ್ಯ ಸಿಕ್ಕಾಗಿನಿಂದ ಇದುವರೆಗೂ ಈ ದೇಶವನ್ನಾಳಿದ ರಾಷ್ಟ್ರೀಯ ಪಕ್ಷಗಳು ದೇಶವನ್ನು ಕೊಳ್ಳೆ ಹೊಡೆದಿವೆ. ಮುಂಬರುವ ಚುನಾವಣೆಗಳಲ್ಲಿ ರಾಷ್ಟ್ರೀಯ ಪಕ್ಷಗಳನ್ನು ತಿರಸ್ಕರಿಸಿ ಬಿ.ಎಸ್.ಆರ್.ಕಾಂಗ್ರೆಸ್‌ನ್ನು ಬೆಂಬಲಿಸುವ ಮೂಲಕ ಕರ್ನಾಟಕವೇ ದೆಹಲಿಯನ್ನಾಳಲು ಅವಕಾಶ ಕಲ್ಪಿಸಬೇಕೆಂದು ಬಿ.ಎಸ್.ಆರ್. ಕಾಂಗ್ರೆಸ್ ಪಕ್ಷದ ಸಂಸ್ಥಾಪಕ ಬಿ. ಶ್ರೀರಾಮುಲು ಮನವಿ ಮಾಡಿಕೊಂಡರು.

ಇಲ್ಲಿನ ಟಿ.ಎ.ಪಿ.ಸಿ.ಎಂ.ಎಸ್.ಆವರಣದಲ್ಲಿ ಭಾನುವಾರ ಬಿ.ಎಸ್.ಆರ್. ಕಾಂಗ್ರೆಸ್ ಪಕ್ಷ ಏರ್ಪಡಿಸಿದ್ದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.ಪಕ್ಷ ಸ್ಥಾಪನೆಗೊಂಡ ಏಳೆಂಟು ತಿಂಗಳಿನಲ್ಲಿಯೇ ಇಷ್ಟೊಂದು ಜನ ಪ್ರಿಯತೆಯನ್ನು ಗಳಿಸಿಕೊಂಡದ್ದನ್ನು ನೋಡಿದರೆ ಖಂಡಿತವಾಗಿಯೂ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತದೆ. ಬಡವರ ಕಣ್ಣೀರೊರೆಸಿ ಅವರ ಮುಖದಲ್ಲಿ ಮಂದಹಾಸವನ್ನು ಮೂಡಿಸುತ್ತದೆ. ಅದಕ್ಕೆ ಜನರ ಸಹಕಾರವೂ ಮುಖ್ಯ ಎಂದು ಅವರು ತಿಳಿಸಿದರು.ಅಧಿಕಾರದಲ್ಲಿರುವವರೆಲ್ಲಾ ತಾವು ಅಭಿವೃದ್ಧಿಯಾದರೆ ಸಾಕು, ದೇಶವೇ ಅಭಿವೃದ್ಧಿಯಾದಂತೆ ಎಂದು ತಿಳಿದಿರುವ ರಾಜಕಾರಣಿಗಳು ಇರುವವರೆಗೂ ಈದೇಶ ದಿವಾಳಿಯ ಅಂಚಿನತ್ತ ಸಾಗುತ್ತಲೇ ಇರುತ್ತದೆಂದು ಮೂದಲಿಸಿದರು.ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ ಮಾತನಾಡಿ, ದಕ್ಷಿಣ ಭಾರತದಲ್ಲಿಯೇ ಮೊದಲ ಬಾರಿ ಅಧಿಕಾರಕ್ಕೆ ಬಂದ ಭಾರತೀಯ ಜನತಾ ಪಕ್ಷಕ್ಕೆ ಇದೇ ಕೊನೆಯ ಬಾರಿಯದೆಂದು ಭವಿಷ್ಯ ನುಡಿದರು. ರಾಜ್ಯ ಭೀಕರ ಬರಗಾಲವನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಬಿಡಿಗಾಸು ನೆರವು ನೀಡದ ಕೇಂದ್ರ ಸರಕಾರವನ್ನು ಟೀಕಿಸಿದರಲ್ಲದೇ ಜನತೆಗೆ ಇದನ್ನು ಹೇಳಲು ನಾವು ಬಂದಿದ್ದೇವೆ ಹೊರತು ಪ್ರಚಾರಕ್ಕಾಗಿ ಬಂದಿಲ್ಲವೆಂದು ಸ್ಪಷ್ಟಪಡಿಸಿದರು.ಪಕ್ಷದ ರಾಜ್ಯ ವಕ್ತಾರ ವೈ.ಎಸ್.ಗೌಡರ, ಜಿಲ್ಲಾ ಸಂಚಾಲಕ ಎಂ.ಎಸ್.ಪಾಟೀಲ, ಸಹ ಸಂಚಾಲಕ ಬಿ.ಎಚ್.ನಂದೆಪ್ಪನವರ, ಡಾ.ಮಹಿಪಾಲ, ಈರಣ್ಣ ಹಳೇಗೌಡರ, ಪ್ರಕಾಶ ಉಪಸ್ಥಿತರಿದ್ದರು.ಇದಕ್ಕೂ ಮುನ್ನ ಶ್ರೆರಾಮುಲು ಹಾಗೂ ಬಳಗದವರು ಡಾ.ಬಿ.ಆರ್.ಅಂಬೇಡ್ಕರ್, ವೀರ ಸಿಂಧೂರ ಲಕ್ಷ್ಮಣ, ಶಿವಾಜಿ ವೃತ್ತ, ಸಿದ್ಧೇಶ್ವರ ದೇವಸ್ಥಾನಗಳಿಗೆ ತೆರಳಿ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry