ರಾಷ್ಟ್ರೀಯ ಬಾಲ್‌ಬ್ಯಾಡ್ಮಿಂಟನ್‌ಗೆ ಕರ್ನಾಟಕ ತಂಡ

6

ರಾಷ್ಟ್ರೀಯ ಬಾಲ್‌ಬ್ಯಾಡ್ಮಿಂಟನ್‌ಗೆ ಕರ್ನಾಟಕ ತಂಡ

Published:
Updated:

ಬೆಂಗಳೂರು: ಉದ್ಯಾನನಗರಿಯಲ್ಲಿ ನಡೆಯಲಿರುವ 58ನೇ ಸೀನಿಯರ್ ರಾಷ್ಟ್ರೀಯ ಬಾಲ್‌ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ಗೆ ಕರ್ನಾಟಕ ತಂಡವನ್ನು ಪುರುಷರ ವಿಭಾಗದಲ್ಲಿ  ಎಸ್.ಜೆ. ವೆಂಕಟರಾಮ್, ಮಹಿಳಾ ತಂಡವನ್ನು ಸ್ಮಿತಾ  ಎನ್. ಮುನ್ನಡೆಸಲಿದ್ದಾರೆ.ಡಿಸೆಂಬರ್ 26ರಿಂದ 30ರ ವರೆಗೆ ಬಾಗಲಕುಂಟೆಯಲ್ಲಿರುವ ಎಂಇಐ ಲೇಔಟ್‌ನ ಕಾರ್ಪೋರೇಷನ್ ಕ್ರೀಡಾಂಗಣದಲ್ಲಿ ಚಾಂಪಿಯನ್‌ಷಿಪ್ ನಡೆಯಲಿದೆ.

ತಂಡಗಳು: ಪುರುಷರ ವಿಭಾಗ: ಎಸ್.ಜೆ. ವೆಂಕಟರಾಮ್ (ನಾಯಕ), ಜಗನ್ನಾಥ್, ಕಿರಣ್ ಕುಮಾರ್, ವಿಜಿ   ಕುಮಾರ್, ದಿವಾಕರ್, ಸುದರ್ಶನ್, ಮಹಮ್ಮದ್ ಅಸ್ಲಾಮ್, ಮೋಹನ್ ಕುಮಾರ್, ವಿಜಯ ಎಂ., ವರ್ಣಾಕರ್ ಹಾಗೂ ಗಿರಿಪ್ರಸಾದ್. ಕೋಚ್: ಗೌತಮ್. ಮ್ಯಾನೇಜರ್: ಪಿ.ಎಸ್. ಸತೀಶ್.

ಮಹಿಳಾ ವಿಭಾಗ: ಸ್ಮಿತಾ ಎನ್. (ನಾಯಕಿ), ಜಿ. ಸೌಮ್ಯಾ, ಸಿ.ಎಂ. ಯಶೋದಾ, ಬಿ. ರಂಜಿನಿ, ಹೇಮಾ, ಚೈತ್ರಾ, ಪೂರ್ಣಿಮಾ, ಪ್ರತಿಜ್ಞಾ, ರಜಿನಿ ಹಾಗೂ ರಶ್ಮಿ.  ಆರ್. ಸುಂದರ್‌ರಾಜ್ (ಕೋಚ್), ಸುಜಾತ (ಮ್ಯಾನೇಜರ್).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry