ಶುಕ್ರವಾರ, ನವೆಂಬರ್ 15, 2019
20 °C

ರಾಷ್ಟ್ರೀಯ ಸಂಕ್ಷಿಪ್ತ ಸುದ್ದಿಗಳು

Published:
Updated:

ಸಾಮೂಹಿಕ ಅತ್ಯಾಚಾರ ಮೂವರ ಸೆರೆ

ಚಂಡೀಗಡ (ಐಎಎನ್‌ಎಸ್):
ಲೂಧಿಯಾನದಲ್ಲಿ ಯುವತಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ಪೊಲೀಸರು ಮೂವರನ್ನು ಗುರುವಾರ ಬಂಧಿಸಿದ್ದಾರೆ.ಬಂಧಿತರನ್ನು ಅತ್ಯಾಚಾರಕ್ಕೊಳಗಾದ ಯುವತಿಯ ಚಿಕ್ಕಮ್ಮ ,ಲೂಧಿಯಾನ ಜಿಲ್ಲೆಯ ರಾಜೊವಾಲ್ ಹಳ್ಳಿಯ ಮಂಜಿತ್ ಕೌರ್, ಜಲಂಧರ್‌ನ ಮಂಜಿದರ್ ಸಿಂಗ್ ಔಲಾಖ್ ಮತ್ತು ಕಪುರ್ತಲಾ ಪಟ್ಟಣದ ರಣಜಿತ್ ಕುಮಾರ್ ಎಂದು ಗುರುತಿಸಲಾಗಿದೆ.`ಏಪ್ರಿಲ್ 21ರಂದು, ಆಕೆಯ ಚಿಕ್ಕಮ್ಮ ಶಾಪಿಂಗ್‌ಗಾಗಿ ಯುವತಿಯನ್ನು ಕರೆದು ಯುವತಿಯ ಕೈಗೆ ರೂ. 100 ಹಣ ಕೊಟ್ಟು ಇನ್ನಿಬ್ಬರ ಜೊತೆಯಲ್ಲಿ ಜಲಂಧರ್ ಮಾಲ್‌ಗೆ ಶಾಪಿಂಗ್‌ಗಾಗಿ ಕಳುಹಿಸಿದ್ದಾಳೆ. ಆದರೆ ಆ ಇಬ್ಬರು ವ್ಯಕ್ತಿಗಳು ಆಕೆಯನ್ನು ಮಾಲ್‌ಗೆ ಕರೆದೊಯ್ಯುವ ಬದಲು ಹಿಮಾಚಲ ಪ್ರದೇಶದ ಉನಾ ಪಟ್ಟಣಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ' ಎಂದು ತನಿಖಾಧಿಕಾರಿ ಕಮಲ್ ದತ್  ತಿಳಿಸಿದ್ದಾರೆ.8 ವರ್ಷದ ಬಾಲಕಿ ಮೇಲೆ ಅತ್ಯಾಚಾರ

ಕರೀಂ ಗಂಜ್/ಅಸ್ಸಾಂ (ಪಿಟಿಐ):
ದುಷ್ಕರ್ಮಿಯೊಬ್ಬ ಎಂಟು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಅಸ್ಸಾಂನ ಕರೀ ಗಂಜ್ ಜಿಲ್ಲೆಯಲ್ಲಿ ನಡೆದಿದೆ. ಬಾಲಕಿ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಸಂತ್ರಸ್ತೆಯ ತಾಯಿ ನೀಡಿದ ದೂರಿನ ಮೇರೆಗೆ ಆರೋಪಿ ಸುಲ್ತಾನ್ ಅಹಮದ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಮಧ್ಯವಯಸ್ಕನಿಂದ ಅತ್ಯಾಚಾರ

ಪಟ್ನಾ  (ಐಎಎನ್‌ಎಸ್): ಐ
ವತ್ತು ವರ್ಷದ ವ್ಯಕ್ತಿಯೊಬ್ಬ ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಮುಜಾಫರ್‌ಪುರ ಜಿಲ್ಲೆಯ ಮೋತಿಪುರ ಗ್ರಾಮದಲ್ಲಿ ಸಂಭವಿಸಿದೆ. ಈ ಘಟನೆಯಿಂದ ಆಕ್ರೋಶಗೊಂಡ ಜನರು ಪ್ರತಿಭಟನೆ ನಡೆಸಿದ್ದಾರೆ. ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂಬ ಸಂಶಯದ ಮೇರೆಗೆ  ಆರೋಪಿ ಖಮ್ರುಲ್ ಹೊಡಾನನ್ನು  ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಮಹಿಳೆ ಸೇರಿ ಮೂವರಿಗೆ ಜೀವಾವಧಿ ಶಿಕ್ಷೆ

ಗುಡಗಾಂವ್ (ಐಎಎನ್‌ಎಸ್): ಪ
ತಿಯನ್ನೇ ಕೊಲೆ ಮಾಡಿ, ಆತನ ಜನನಾಂಗಕತ್ತರಿಸಿದ್ದ ಮಹಿಳೆ ಮತ್ತು ಆಕೆಗೆ ನೆರವಾದ ಇಬ್ಬರು ಸಹಚರರಿಗೆ ಇಲ್ಲಿನ ಜಿಲ್ಲಾ ನ್ಯಾಯಾಲಯ ಗುರುವಾರ ಜೀವಾವಧಿ ಶಿಕ್ಷೆ ವಿಧಿಸಿದೆ.ನಗೀನಾ (36), ಸತ್ಯೆಂದರ್ ಅಲಿಯಾಸ್ ಸೋನು (35) ಹಾಗೂ ಅರವಿಂದ್ (23) ಶಿಕ್ಷೆಗೊಳಗಾದವರು.ಮೊಹಮ್ಮದ್ ಸನಾವುಲ್ಲ ಅವರ ಪತ್ನಿಯಾದ ನಗೀನಾ, ಸೋನು ಮತ್ತು ಅರವಿಂದ್ ಅವರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು. ವಿಷಯ ತಿಳಿದ ಸನಾವುಲ್ಲ ಪತ್ನಿಯ ನಡವಳಿಕೆಗೆ ವಿರೋಧ ವ್ಯಕ್ತಪಡಿಸಿದ್ದ. ಇದರಿಂದ ಸಿಟ್ಟಿಗೆದ್ದ ನಗೀನಾ ತನ್ನಿಬ್ಬರು ಸಹಚರರೊಂದಿಗೆ ಸೇರಿಕೊಂಡು ಕಳೆದ ಏಪ್ರಿಲ್‌ನಲ್ಲಿ ಪತಿಯನ್ನು ಹತ್ಯೆ ಮಾಡಿದ್ದಳು.

ಪ್ರತಿಕ್ರಿಯಿಸಿ (+)