ರಾಷ್ಟ್ರೀಯ: ಸಂಕ್ಷಿಪ್ತ ಸುದ್ದಿಗಳು

7

ರಾಷ್ಟ್ರೀಯ: ಸಂಕ್ಷಿಪ್ತ ಸುದ್ದಿಗಳು

Published:
Updated:

ಬೆಂಕಿ ಅನಾಹುತ

ಮುಂಬೈ (ಪಿಟಿಐ):
ಕಲರ್ಸ್ ಚಾನಲ್‌ನ ಜನಪ್ರಿಯ ಟಿವಿ ಶೋ ‘ಕಾಮಿಡಿ ನೈಟ್ಸ್‌ ವಿತ್‌ ಕಪಿಲ್‌’ ಕಾರ್ಯಕ್ರಮದ ಸೆಟ್‌ಗೆ ಬೆಂಕಿ ಹತ್ತಿಕೊಂಡು ಉರಿದ ಘಟನೆ ಇಲ್ಲಿನ ಗುಡಗಾಂವ್ ಫಿಲ್ಮ್ ಸಿಟಿಯಲ್ಲಿ ಬುಧವಾರ ನಡೆದಿದೆ.ಬೆಳಗ್ಗೆ 8 ಗಂಟೆಗೆ ಬೆಂಕಿ ಹತ್ತಿದ್ದರಿಂದ ಸೆಟ್‌ನಲ್ಲಿ ಯಾವುದೇ ಚಿತ್ರೀಕರಣ ನಡೆಯುತ್ತಿರಲಿಲ್ಲ ಹಾಗಾಗಿ ಪ್ರಾಣಹಾನಿಯಾಗಿಲ್ಲ ಎಂದು ಮೂಲಗಳು ತಿಳಿಸಿವೆ.  ತಕ್ಷಣ ಸ್ಥಳಕ್ಕೆ ಧಾವಿಸಿದ ಆ್ಯಂಬುಲೆನ್ಸ್ ಹಾಗೂ ಅಗ್ನಿಶಾಮಕ ಸಿಬ್ಬಂದಿಯ ಸಹಾಯದಿಂದ ಹೆಚ್ಚಿನ ಅವಘಡವಾಗಿಲ್ಲ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ.ಅತ್ಯಾಚಾರ: ವಿಚಾರಣೆ ಮುಂದಕ್ಕೆ

ಮುಂಬೈ (ಪಿಟಿಐ):
ದೆಹಲಿ ಅತ್ಯಾಚಾರ ಪ್ರಕರಣದಲ್ಲಿ ಮರಣದಂಡನೆಗೆ ಗುರಿಯಾಗಿರುವ ನಾಲ್ವರು ಅಪರಾಧಿಗಳ ವಿಚಾರಣೆಯನ್ನು ಹೈಕೋರ್ಟ್ ಅಕ್ಟೋಬರ್‌ 1 ಕ್ಕೆ ಮುಂದೂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry