ರಾಷ್ಟ್ರೀಯ ಸಬ್ ಜೂನಿಯರ್ ಕೊಕ್ಕೊ;ಕರ್ನಾಟಕ ಮಡಿಲಿಗೆ ಪ್ರಶಸ್ತಿ

7

ರಾಷ್ಟ್ರೀಯ ಸಬ್ ಜೂನಿಯರ್ ಕೊಕ್ಕೊ;ಕರ್ನಾಟಕ ಮಡಿಲಿಗೆ ಪ್ರಶಸ್ತಿ

Published:
Updated:

ಬೆಂಗಳೂರು: ಕರ್ನಾಟಕ ತಂಡದವರು ಇಲ್ಲಿ ಕೊನೆಗೊಂಡ 23ನೇ ರಾಷ್ಟ್ರೀಯ ಸಬ್ ಜೂನಿಯರ್ ಕೊಕ್ಕೊ ಚಾಂಪಿಯನ್‌ಷಿಪ್‌ನ ಬಾಲಕರ ವಿಭಾಗದಲ್ಲಿ ಚಾಂಪಿಯನ್ ಆದರು. ಇದರಿಂದ ಸ್ಥಳೀಯ ಅಭಿಮಾನಿಗಳ ಎದುರು ಸಂಭ್ರಮಿಸುವ ಅವಕಾಶವೂ ಆತಿಥೇಯರ ಪಾಲಾಯಿತು.ನಗರದ ಹೊಂಬೇಗೌಡ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಫೈನಲ್ ಪಂದ್ಯದಲ್ಲಿ ಕರ್ನಾಟಕ 10-9ಪಾಯಿಂಟ್‌ಗಳಿಂದ ಮಹಾರಾಷ್ಟ್ರ ತಂಡವನ್ನು ಮಣಿಸಿತು.ಆರಂಭದಿಂದಲೂ ಸಾಕಷ್ಟು ಕುತೂಹಲಕ್ಕೆ ಈ ಪಂದ್ಯ ಕಾರಣವಾಗಿತ್ತು. ಕೊನೆಗೆ ವಿಜಯದ ವೇದಿಕೆ ಮೇಲೆ ಸಂಭ್ರಮಿಸುವ ಅವಕಾಶ ಲಭಿಸಿದ್ದು ಕರ್ನಾಟಕಕ್ಕೆ. ಇದೇ ವಿಭಾಗದಲ್ಲಿ ಮೂರನೇ ಸ್ಥಾನಕ್ಕೆ ನಡೆದ `ಪ್ಲೇ ಆಫ್~ ಪಂದ್ಯದಲ್ಲಿ ಪಶ್ಚಿಮ ಬಂಗಾಳ 15-14ರಲ್ಲಿ ಕೇರಳ ಎದುರು ಜಯಿಸಿತು.ಬಾಲಕಿಯರ ಸಬ್ ಜೂನಿಯರ್ ವಿಭಾಗದಲ್ಲಿ ಮಹಾರಾಷ್ಟ್ರ ಪ್ರಶಸ್ತಿ ಗೆದ್ದುಕೊಂಡಿತು. ಈ ತಂಡ ಅಂತಿಮ ಘಟ್ಟದ ಪಂದ್ಯದಲ್ಲಿ 10-7ರಲ್ಲಿ ಪಶ್ವಿಮ ಬಂಗಾಳವನ್ನು ಸೋಲಿಸಿತು. ದೆಹಲಿ ತಂಡ 15-5ರಲ್ಲಿ ಕರ್ನಾಟಕ ಬಾಲಕಿಯರ ತಂಡವನ್ನು ಸೋಲಿಸಿ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟಿತು.ಫೆಡರೇಷನ್ ಕಪ್ ಫುಟ್‌ಬಾಲ್‌ನ ಪುರುಷರ ವಿಭಾಗದ ಫೈನಲ್‌ನಲ್ಲಿ ಮಹಾರಾಷ್ಟ್ರ 14-12ರಲ್ಲಿ ಕೊಲ್ಲಾಪುರದ ಮೇಲೂ, ಮಹಿಳಾ ವಿಭಾಗದಲ್ಲಿ ಕೇರಳ 11-9ರಲ್ಲಿ ಕರ್ನಾಟಕದ ವಿರುದ್ಧವೂ ಗೆಲುವು ಸಾಧಿಸಿ ಪ್ರಶಸ್ತಿ ತನ್ನದಾಗಿಸಿಕೊಂಡಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry