ರಾಷ್ಟ್ರೀಯ ಸಿಇಟಿ ನಡೆಸಲು :ಪ್ರಾಧಿಕಾರ- ಕೇಂದ್ರ ಪ್ರಸ್ತಾವ

7

ರಾಷ್ಟ್ರೀಯ ಸಿಇಟಿ ನಡೆಸಲು :ಪ್ರಾಧಿಕಾರ- ಕೇಂದ್ರ ಪ್ರಸ್ತಾವ

Published:
Updated:

ನವದೆಹಲಿ: ರಾಷ್ಟ್ರದೆಲ್ಲೆಡೆ ಇರುವ ಎಂಜಿನಿಯರಿಂಗ್ ಕಾಲೇಜುಗಳಿಗೆ ಅನ್ವಯವಾಗುವಂತೆ ಒಂದೇ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸುವ ಸಲುವಾಗಿ ರಾಷ್ಟ್ರೀಯ ಪ್ರಾಧಿಕಾರ ಸ್ಥಾಪಿಸುವ ಪ್ರಸ್ತಾವ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಮುಂದಿದೆ. ಈ ಪ್ರಾಧಿಕಾರಕ್ಕೆ ಶಾಸನಬದ್ಧ ಸ್ಥಾನಮಾನ ನೀಡುವುದಕ್ಕಾಗಿ ಕರಡು ಮಸೂದೆಯನ್ನೂ ಇಲಾಖೆ ಸಿದ್ಧಪಡಿಸಲಿದೆ.ಈ ಶಾಸನಬದ್ಧ ಪ್ರಾಧಿಕಾರ ರಚನೆಯಾಗುವ ತನಕ ಪರಿಶೀಲನಾ ಹಾಗೂ ಮೌಲ್ಯಾಂಕನ ಕೇಂದ್ರವೊಂದನ್ನು ಸ್ಥಾಪಿಸಲಾಗುತ್ತದೆ. ಈ ಕೇಂದ್ರವು 2013ರ ಶೈಕ್ಷಣಿಕ ವರ್ಷದಿಂದಲೇ ಜಾರಿಯಾಗುವ ನಿರೀಕ್ಷೆಯಲ್ಲಿರುವ ರಾಷ್ಟ್ರಮಟ್ಟದ ಏಕರೂಪ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ನಡೆಸಲು ಸಿಬಿಎಸ್‌ಇ ಗೆ ನೆರವು ನೀಡಲಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಕೇಳಲಾಗುವ ಪ್ರಶ್ನೆಗಳ ಸ್ವರೂಪದ ಬಗ್ಗೆ ನಿರ್ಧರಿಸಿರುವುದು ಈ ಮೌಲ್ಯಾಂಕನ ಕೇಂದ್ರದ ಪ್ರಮುಖ ಹೊಣೆಯಾಗಿರುತ್ತದೆ.ಅಮೆರಿಕದಲ್ಲಿ ನಡೆಯುವ ಸ್ಕೊಲ್ಯಾಸ್ಟಿಕ್ ಆಪ್ಟಿಟ್ಯೂಡ್ ಟೆಸ್ಟ್ (ಎಸ್‌ಎಟಿ) ಮಾದರಿಯಲ್ಲಿ ಈ ಸಿಇಟಿ ನಡೆಯಲಿದೆ. ಈ ಪರೀಕ್ಷಾ ಪದ್ಧತಿ ಜಾರಿಗೆ ಬರುತ್ತಿದ್ದಂತೆ ಜೆಇಇ, ಎಐಇಇಇ ಮತ್ತಿತರ ಪರೀಕ್ಷೆಗಳು ರದ್ದಾಗಲಿವೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry